ಬುಧವಾರ, ನವೆಂಬರ್ 25, 2020
26 °C

ಶೌರ್ಯ ಪ್ರದರ್ಶಿಸಿದ ಬಾಲಕರಿಗೆ ಕೇಂದ್ರದಿಂದ ‘ಜೀವನ ರಕ್ಷಾ’ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ‍ಪ್ರಾಣಾ‍ಪಾಯದಿಂದ ರಕ್ಷಿಸಿದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಬಾಲಕರಾದ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಮತ್ತು ಶಿವಾನಂದ ದಶರಥ ಹೊಸಟ್ಟಿ ಅವರನ್ನು ಇಲ್ಲಿನ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಶುಕ್ರವಾರ ಸನ್ಮಾನಿಸಿದ ಅಧಿಕಾರಿಗಳು, ಕೇಂದ್ರ ಗೃಹ ಸಚಿವಾಲಯದಿಂದ ಕೊಡಮಾಡಿದ ‘ಜೀವನ ರಕ್ಷಾ’ ಪದಕ, ತಲಾ ₹ 1 ಲಕ್ಷ ಚೆಕ್ ಮತ್ತು ಪ್ರಮಾಣಪತ್ರ ವಿತರಿಸಿದರು.

ಈ ಬಾಲಕರು, 2018ರ ಮೇ 8ರಂದು ಗೋಕಾಕ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿ ಹೋಗುತ್ತಿದ್ದ ಬಾಲಕನ ಚೀರಾಟ ಕೇಳಿ ಕೂಡಲೇ ದಾವಿಸಿ ನೆರವಾಗಿದ್ದರು. ನೀರಿನ ರಭಸಕ್ಕೆ ಭಯ ಪಡದೆ ಹಳ್ಳಕ್ಕೆ ಹಾರಿ ಮುಳುಗುತ್ತಿದ್ದ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ ಧೈರ್ಯ–ಸಾಹಸ ಪ್ರದರ್ಶಿಸಿದ್ದರು. ಸಮಯಪ್ರಜ್ಞೆ ತೋರಿದ್ದರು. ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2018ರ ನ. 14ರಂದು  ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಈಗ ಕೇಂದ್ರ ಗೃಹ ಸಚಿವಾಲಯದಿಂದ ಪುರಸ್ಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ತಿಳಿಸಿದರು.

ಡಿಸಿಪಿ ವಿಕ್ರಮ್ ಅಮಟೆ, ಎಸಿಪಿ ನಾರಾಯಣ ಭರಮನಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.