ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ |ಕನ್ನಡ ಭಾಷೆ ಮೆರೆಯದಿರಿ: ಉದ್ಯಮಿ ಶಿವಕುಮಾರ ಸವದಿ

Published 4 ಅಕ್ಟೋಬರ್ 2023, 7:04 IST
Last Updated 4 ಅಕ್ಟೋಬರ್ 2023, 7:04 IST
ಅಕ್ಷರ ಗಾತ್ರ

ಅಥಣಿ: ‘ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಕಲಿತರೂ ಕನ್ನಡ ಭಾಷೆಯನ್ನು ಮೆರೆಯಬಾರದು. ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ತಿಳಿದುಕೊಳ್ಳಲು ಕನ್ನಡ ಮುಖ್ಯವಾಗಿದೆ’ ಉದ್ಯಮಿ ಶಿವಕುಮಾರ ಸವದಿ ಹೇಳಿದರು.

ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಸಿ.ಬಿ.ಎಸ್.ಇ. ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಕನ್ನಡ ಶಿಕ್ಷಕರ ಸಂಘವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.

ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಜಿ. ವಂಟಿಗೋಡಿ, ‘ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಜವಾಬ್ದಾರಿ ಕನ್ನಡ ಶಿಕ್ಷಕರ ಮೇಲಿದೆ’ ಎಂದರು.

ಪ್ರಾಚಾರ್ಯ ಸತೀಶ ಹಿರಮೇಠ ಮಾತನಾಡಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕೋರಿ, 
ಮಹೇಶ ಶಿರಸಂಗಿ, ಸಂತೋಷ ಹುಬಳ್ಳಿ, ಈರಣ್ಣಾ ಅಂಬಲಿ, ಸೂರ್ಯಕಾಂತ ಮಗದುಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT