ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: 58 ವರ್ಷಗಳಲ್ಲಿ 2ನೇ ಬಾರಿಗೆ ಚುನಾವಣೆ

ಕರಗಾಂವ ಗ್ರಾಮ ಪಂಚಾಯಿತಿ ವಿಶೇಷ
Last Updated 17 ಡಿಸೆಂಬರ್ 2020, 9:22 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಕರಗಾಂವ ಗ್ರಾಮದಲ್ಲಿ ಗ್ರಾಮ ‍ಪಂಚಾಯಿತಿಗೆ 58 ವರ್ಷಗಳಲ್ಲಿ ಈಗ ನಡೆಯುತ್ತಿರುವುದು 2ನೇ ಚುನಾವಣೆಯಾಗಿದೆ.

ಗ್ರಾಮದ ಮುಖಂಡರಲ್ಲಿನ ಸಮನ್ವಯತೆ ಮತ್ತು ಎಲ್ಲ ಸಮುದಾಯಗಳ ಸಹಕಾರದೊಂದಿಗೆ ಅವಿರೋಧ ಆಯ್ಕೆಯೇ ನಡೆಯುತ್ತಿತ್ತು. ಹೋದ ಬಾರಿ ಚುನಾವಣೆ ಜರುಗಿದೆ. ಈ ಬಾರಿಯೂ ಚುನಾವಣೆಗೆ ಸಜ್ಜಾಗಿದೆ. ನಿರಂತರವಾಗಿ 53 ವರ್ಷಗಳವರೆಗೆ ಅವಿರೋಧವಾಗಿ ಆಯ್ಕೆ ಮಾಡಿರುವ ಹೆಗ್ಗಳಿಕೆ ಈ ಗ್ರಾಮಕ್ಕಿದೆ.

1962ರಲ್ಲಿ ಕರಗಾಂವ ಗ್ರುಪ್‌ ಗ್ರಾಮ ಪಂಚಾಯಿತಿ ರಚನೆಯಾಗಿದ್ದು, ಅಂದಿನಿಂದ 2015ರವರೆಗೆ ಚುನಾವಣೆಗಳು ಅವಿರೋಧವಾಗಿಯೇ ನಡೆದಿವೆ. 1962ರಲ್ಲಿ ಗ್ರುಪ್ ಗ್ರಾಮ ಪಂಚಾಯಿತಿ, 1985ರಲ್ಲಿ ಮಂಡಲ ಪಂಚಾಯಿತಿ ಹಾಗೂ 1993ರಲ್ಲಿ ಗ್ರಾಮ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. 1962ರಿಂದ ಕರಗಾಂವ ಗ್ರಾಮ ಪಂಚಾಯಿತಿ ನಡೆದಿರುವುದು ಕೇವಲ ಒಂದು ಚುನಾವಣೆ ಮಾತ್ರ.

ಈಗ, ಕರಗಾಂವ ಹೊರತುಪಡಿಸಿ ಮಜರೆ ಗ್ರಾಮಗಳಾದ ಡೋಣವಾಡ ಮತ್ತು ಹಂಚಿನಾಳ ಕೆ.ಕೆ. ಗ್ರಾಮಗಳಲ್ಲಿ ಮಾತ್ರ 25 ವರ್ಷಗಳಿಂದ ಚುನಾವಣೆ ನಡೆದಿದೆ. ಈ ಬಾರಿ ಚುನಾವಣೆಗೆ ಕರಗಾಂವ ಗ್ರಾಮ ಪಂಚಾಯಿತಿಯ 16 ಸ್ಥಾನಗಳಿಗೆ ಮೂರು ಗ್ರಾಮಗಳಿಂದ ಒಟ್ಟು 54 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಅವಧಿಗೂ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಕರಗಾಂವ, ಡೋಣವಾಡ, ಹಂಚನಾಳ ಕೆ.ಕೆ. ಸೇರಿ ಒಟ್ಟು ಮೂರು ಗ್ರಾಮಗಳು ಕರಗಾಂವ ಪಂಚಾಯಿತಿ ವ್ಯಾಪ್ತಿಯಲಿವೆ. 16 ಸದಸ್ಯ ಸ್ಥಾನಗಳನ್ನು ಹೊಂದಿದೆ. ಒಟ್ಟು 6 ವಾರ್ಡ್‌ಗಳಿವೆ. ಕರಗಾಂವದಲ್ಲಿ 9, ಡೋಣವಾಡದಲ್ಲಿ 5 ಮತ್ತು ಹಂಚಿನಾಳ ಕೆ.ಕೆ.ಯಲ್ಲಿ 2 ಸದಸ್ಯ ಸ್ಥಾನಗಳಿವೆ.

ತಾಲ್ಲೂಕು ಕೇಂದ್ರ ಚಿಕ್ಕೋಡಿಯಿಂದ 15 ಕಿ.ಮೀ. ಅಂತರದಲ್ಲಿರುವ ಅಲ್ಲಿ ಸತತ ಅವಿರೋಧ ಆಯ್ಕೆಗೆ ಮುಖಂಡರಾದ ಡಿ.ಟಿ. ಪಾಟೀಲ, ಎಸ್.ಆರ್. ಪಾಟೀಲ, ವಕೀಲ ಟಿ.ವೈ. ಕಿವಡ ಮೊದಲಾದವರು ನೇತೃತ್ವ ವಹಿಸಿದ್ದರು. ಇದು ಗ್ರಾಮದ ಅಭಿವೃದ್ಧಿಗೂ ಸಹಕಾರಿಯಾಗಿತ್ತು ಎಂದು ಮುಖಂಡರು ತಿಳಿಸಿದರು.

‘ಕರಗಾಂವ ಗ್ರಾಮದಲ್ಲಿ 1962ರಿಂದ ಇದುವರೆಗೆ ಒಂದು ಬಾರಿ ಮಾತ್ರ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದೆ. 53 ವರ್ಷಗಳವರೆಗೆ ಅವಿರೋಧ ಆಯ್ಕೆ ನಡೆದಿದೆ. ಈ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳ ಕೆ.ಕೆ. ಮತ್ತು ಡೋಣವಾಡದಲ್ಲಿ 25 ವರ್ಷಗಳಿಂದ ಚುನಾವಣೆ ನಡೆಯುತ್ತಿದೆ. ಪ್ರಸಕ್ತ ವರ್ಷ ಕರಗಾಂವ ಗ್ರಾಮದಲ್ಲೂ ಚುನಾವಣೆ ಸಾಧ್ಯತೆ ಹೆಚ್ಚಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT