ಭಾನುವಾರ, ಅಕ್ಟೋಬರ್ 25, 2020
28 °C

ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ‘ಎಂಇಎಸ್ ಸಂಘಟನೆ ನ.1ರಂದು ಆಯೋಜಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿ ಕರವೇ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಎಂಇಎಸ್ ಸಂಘಟನೆಯ ಪ್ರತಿಕೃತಿ ದಹಿಸಿದರು.

ಅಧ್ಯಕ್ಷ ಬಸವರಾಜ ಖಾನಪ್ಪನವರ, ‘ಆ ಸಂಘಟನೆಯು ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ ಕರಾಳ ದಿನಾಚರಣೆ ನಡೆಸುತ್ತದೆ. ನಾಡ ವಿರೋಧಿಯಾದ ಈ ಕ್ರಮಕ್ಕೆ ಅವಕಾಶ ಕೊಡಬಾರದು. ಅದನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ಕೃಷ್ಣ ಖಾನಪ್ಪನವರ, ದೀಪಕ ಹಂಜಿ, ಶೆಟ್ಟೆಪ್ಪ ಗಾಡಿವಡ್ಡರ, ಮುಗುಟ ಪೈಲ್ವಾನ್, ಅಶೋಕ ಬಂಡಿವಡ್ಡರ, ನಿಜಾಮ ನಧಾಪ, ರಮೇಶ ಕಮತಿ, ರಾಮ ಕುಡೆಮ್ಮಿ, ಮಂಜುನಾಥ ಪ್ರಭುನಟ್ಟಿ, ಯಲ್ಲಪ್ಪ ಧರ್ಮಟ್ಟಿ, ಶಂಕರಲಿಂಗ ಗಾಡಿವಡ್ಡರ, ಮಾರುತಿ ಗಾಡಿವಡ್ಡರ, ಶಂಕರ ಗಾಡಿವಡ್ಡರ, ರಾಜೇಂದ್ರ ಕೆಂಚನಗುಡ್ಡ, ಮಹಾಂತೇಶ ಹಿರೇಮಠ, ಸತ್ತಾರ ಬೇಪಾರಿ, ವಿಠ್ಠಲ ಹಂಜಿ, ಪ್ರತೀಕ ಪಾಟೀಲ, ಸಂತೋಷ ಕೋಲಕಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.