ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲ ನಂದಗಡಿ ವಿರುದ್ಧ ಕರೀಂಲಾಲ್‌ ತೆಲಗಿ ಪುತ್ರಿ ದೂರು

Published 25 ಏಪ್ರಿಲ್ 2024, 4:21 IST
Last Updated 25 ಏಪ್ರಿಲ್ 2024, 4:21 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ‘ನಮ್ಮ ಕುಟುಂಬವನ್ನು ವಂಚಿಸಿದ ವಕೀಲ ಎಸ್.ಕೆ ನಂದಗಡಿ ಅವರ ವಿರುದ್ಧ ಕ್ರಮ ಕೈಗೊಂಡು, ಬಾರ್ ಕೌನ್ಸಿಲ್‌ನಿಂದ ಅನರ್ಹಗೊಳಿಸುವಂತೆ ಕೋರಿ ಕರ್ನಾಟಕ ಬಾರ್ ಕೌನ್ಸಿಲ್‌ಗೆ ದೂರು ನೀಡಲಾಗಿದೆ’ ಎಂದು ಛಾಪಾಕಾಗದ ಹಗರಣದ ಆರೋಪಿ ಕರೀಂಲಾಲ್‌ ತೆಲಗಿ ಪುತ್ರಿ ಸನಾ ತಾಳಿಕೋಟಿ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಂದೆ ಕರೀಂಲಾಲ್ ತೆಲಗಿ ಬದುಕಿದ್ದಾಗ, ಸಹೋದರ ಅಬ್ದುಲ್ ಅಜೀಂ ಹೆಸರಿನಲ್ಲಿ ಪಟ್ಟಣದ ಹೊರವಲಯದಲ್ಲಿ 6 ಎಕರೆ ಕೃಷಿ ಜಮೀನು ಖರೀದಿಸಿದ್ದರು. ನಮ್ಮ ಕುಟುಂಬದ ಎಲ್ಲಾ ಆಸ್ತಿ ವಿವರದ ಮಾಹಿತಿಯನ್ನು ನಂದಗಡಿ ಹೊಂದಿದ್ದರು. ಛಾಪಾ ಕಾಗದ ಹಗರಣದಲ್ಲಿ ತಂದೆಯವರು ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ, ಆರು ಎಕರೆ ಜಮೀನನ್ನು ನಮಗೆ ನೀಡದೇ ಅಬ್ದುಲ್ ಅಜೀಂ ಅವರ ಕುಟುಂಬದವರಿಗೆ ಕೊಟ್ಟು, ನಂದಗಡಿ ವಂಚಿಸಿದರು’ ಎಂದು ಆರೋಪಿಸಿದರು.

‘ತಂದೆ ಕರೀಂಲಾಲ್‌ ವಿರುದ್ಧದ ವಿವಿಧ ಪ್ರಕರಣಗಳಲ್ಲಿ ನಂದಗಡಿ ವಕಾಲತ್ತು ವಹಿಸಿದ್ದರು. ಈಗ ತಂದೆಯ ಸಹೋದರರ ಪರ ವಕಾಲತ್ತು ವಹಿಸಿ ನಮಗೆ ದ್ರೋಹ ಮಾಡುತ್ತಿದ್ದಾರೆ. ಈ ಕುರಿತು ಒಟ್ಟು 555 ಪುಟಗಳ ದಾಖಲೆಗಳನ್ನು ಬಾರ್ ಕೌನ್ಸಿಲ್‌ಗೆ ಹಾಜರುಪಡಿಸಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಎಸ್.ಕೆ ನಂದಗಡಿ, ‘ಕರೀಂಲಾಲ್‌ ಪುತ್ರಿ ಸನಾ ಅವರು ನನ್ನ ವಿರುದ್ಧ ಬಾರ್ ಕೌನ್ಸಿಲ್‌ಗೆ ದೂರು ಸಲ್ಲಿಸಿದ ಕುರಿತು ನೋಟಿಸ್ ಬಂದಿದೆ. ಈ ಆರೋಪ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು. ಎಲ್ಲ ಅಂಶಗಳಿಗೆ ಸಮರ್ಪಕವಾಗಿ ಉತ್ತರಿಸಿರುವೆ. ಅವರ ಕುಟುಂಬಕ್ಕೆ ನನ್ನಿಂದ ಯಾವುದೇ ದ್ರೋಹವಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT