ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳು ಹೌಸ್‌ಫುಲ್‌!

ಬುಧವಾರ, ಜೂನ್ 26, 2019
23 °C
8 ಶಾಲೆಗಳಲ್ಲೂ 30 ಸೀಟುಗಳು ಭರ್ತಿ

ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳು ಹೌಸ್‌ಫುಲ್‌!

Published:
Updated:
Prajavani

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ‘ಕರ್ನಾಟಕ ಪಬ್ಲಿಕ್ ಸ್ಕೂಲ್‌’ಗಳಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಲಭ್ಯವಾಗಿದೆ.

ಎಲ್ಲ ಸೀಟುಗಳು ಭರ್ತಿಯಾಗಿದ್ದು, ಹೆಚ್ಚುವರಿಯಾಗಿ ಪ್ರವೇಶಕ್ಕೆ ಅನುಮತಿ ಹಾಗೂ ಅದಕ್ಕೆ ಬೇಕಾದ ಸೌಲಭ್ಯ ನೀಡುವಂತೆ ಶಾಲೆಗಳಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಇಲ್ಲಿನ ವಡಗಾವಿ ಹಾಗೂ ರಾಮತೀರ್ಥನಗರ, ಸವದತ್ತಿ ತಾಲ್ಲೂಕಿನ ಸತ್ತಿಗೇರಿ, ಯಕ್ಕುಂಡಿ, ಖಾನಾಪುರ ತಾಲ್ಲೂಕಿನ ಮುಗಳಿಹಾಳ, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಹುಣಸೀಕಟ್ಟಿ ಮತ್ತು ರಾಮದುರ್ಗ ತಾಲ್ಲೂಕಿನ ಕಟಕೋಳದ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳೆಂದು ಬದಲಾಯಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 8 ಶಾಲೆಗಳಲ್ಲಿ 240 ಮಕ್ಕಳಿಗೆ ಅವಕಾಶ ದೊರೆತಿದೆ.

ಎಲ್‌ಕೆಜಿ ತರಗತಿ:

ಇಲ್ಲಿ ಪ್ರಸಕ್ತ ಸಾಲಿನಲ್ಲಿ 1ನೇ ತರಗತಿಗೆ ಇಂಗ್ಲಿಷ್‌ ಮಾಧ್ಯಮದ ಜೊತೆಗೆ ಪೂರ್ವ ಪ್ರಾಥಮಿಕ ಶಾಲೆ–ಎಲ್‌ಕೆಜಿಯನ್ನೂ ಆರಂಭಿಸಲಾಗಿದೆ. ಎಲ್‌ಕೆಜಿಯಲ್ಲಿ ಇಂಗ್ಲಿಷ್ ಮಾಧ್ಯಮವಿಲ್ಲ. ಸರ್ಕಾರದ ಸೂಚನೆ ಪ್ರಕಾರ, ಇಲ್ಲಿ 30 ಸೀಟುಗಳನ್ನು ಭರ್ತಿ ಮಾಡಲು ಅವಕಾಶವಿದೆ. ಅದರಂತೆ ಅಷ್ಟು ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಆದರೆ, ಹೆಚ್ಚುವರಿಯಾಗಿ ಸರಾಸರಿ 30ರಿಂದ 40 ಅರ್ಜಿಗಳು ಸಲ್ಲಿಕೆಯಾಗಿವೆ. ಇದರೊಂದಿಗೆ, ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳ ಸೀಟುಗಳಿಗೂ ಬೇಡಿಕೆ ವ್ಯಕ್ತವಾಗಿರುವುದು ವಿಶೇಷ. ಅಲ್ಲದೇ, ಆಯಾ ಶಾಲೆಗಳಿರುವ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳವರು ಖಾಸಗಿ ಶಾಲೆಗಳಿಗೆ ಮೊರೆ ಹೋಗುವುದು ಕಡಿಮೆಯಾಗಿದೆ.

ಪಬ್ಲಿಕ್ ಶಾಲೆಗಳಾಗಿ ರೂಪಾಂತರಗೊಂಡಿರುವ ಈ ಶಾಲೆಗಳಿಗೆ ಹೆಚ್ಚುವರಿಯಾಗಿ ಒಬ್ಬ ಶಿಕ್ಷಕರು ಹಾಗೂ ಆಯಾ ನೇಮಕಕ್ಕೆ ಅವಕಾಶ ನೀಡಲಾಗಿದೆ. ಬಹುತೇಕ ಕಡೆಗಳಲ್ಲಿ ಅತಿಥಿ ಉಪನ್ಯಾಸಕರನ್ನು 10 ತಿಂಗಳ ಅವಧಿಗಾಗಿ ನೇಮಿಸಿಕೊಳ್ಳಲಾಗಿದೆ. 1ನೇ ತರಗತಿಗೆ ಇಂಗ್ಲಿಷ್ ಮಾಧ್ಯಮ ಆರಂಭವಾಗಿರುವುದರಿಂದ, ಕಾಯಂ ಶಿಕ್ಷಕರಿಗೆ ಇಲಾಖೆಯಿಂದಲೇ ತರಬೇತಿ ನೀಡಲಾಗಿದೆ. ಶಾಲೆಯಲ್ಲಿ ‘ಇಂಗ್ಲಿಷ್ ಕಲಿಕೆಗೆ ಬೇಕಾದ ಪೂರಕ ವಾತಾವರಣ’ ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ.‌

ವಿದ್ಯಾರ್ಥಿಗಳಿಗೆ ಅನುಕೂಲ:

ಸವದತ್ತಿ ತಾಲ್ಲೂಕಿನ ಸತ್ತಿಗೇರಿ ಶಾಲೆ ಪಬ್ಲಿಕ್ ಶಾಲೆಯಾದ ನಂತರ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಅವಕಾಶವಿದೆ. ಇಲ್ಲೀಗ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ‍ಪಿಯು ವಿಭಾಗ ಎನ್ನುವ ವರ್ಗವಿಲ್ಲ. ಎಲ್ಲದಕ್ಕೂ ಪ್ರಾಂಶುಪಾಲರೇ ಮುಖ್ಯಸ್ಥರಾಗಿರಲಿದ್ದಾರೆ. ಅತ್ಯಾಧುನಿಕ ವ್ಯವಸ್ಥೆ ಹಾಗೂ ತಂತ್ರಜ್ಞಾನ ಬಳಸಿಕೊಂಡು ಬೋಧಿಸುತ್ತಿರುವ ಇಲ್ಲಿಗೆ ಪ್ರವೇಶ ಪಡೆಯಲು ಬಹಳಷ್ಟು ಬೇಡಿಕೆ ಕಂಡುಬಂದಿದೆ.

‘ಶಾಲೆಯಲ್ಲಿ ಎಲ್‌ಕೆಜಿಯ ಇನ್ನೊಂದು ವಿಭಾಗ ಆರಂಭಿಸಲು ಅನುಮತಿ ದೊರೆತರೆ ಮತ್ತೆ 30 ಮಕ್ಕಳಿಗೆ ಅವಕಾಶ ಕೊಡಬಹುದು. ಇದಕ್ಕಾಗಿ ಸರ್ಕಾರದ ಅನುಮತಿ ಕೋರಿದ್ದೇವೆ. ಆಯ್ದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸಿದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇಲ್ಲಿ ಎಲ್‌ಕೆಜಿ ಮುಗಿದ ನಂತರ, 1ನೇ ತರಗತಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಸೇರಬಹುದಾಗಿದೆ’ ಎನ್ನುತ್ತಾರೆ ಅವರು.

ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಶಾಲೆಯ ಇತರ ವಿದ್ಯಾರ್ಥಿಗಳೊಂದಿಗೆ ಹಾಲು, ಮಧ್ಯಾಹ್ನದ ಬಿಸಿಯೂಟ ಕೊಡಲಾಗುತ್ತಿದೆ. ಆದರೆ, ಸಮವಸ್ತ್ರ, ಶೂ–ಸಾಕ್ಸ್‌ಗಳು ಪೂರೈಕೆಯಾಗಿಲ್ಲ. ಇದರಿಂದಾಗಿ ಅವರು ಬಣ್ಣದ ಬಟ್ಟೆಗಳೊಂದಿಗೇ ಹಾಜರಾಗುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !