ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಕೃಷ್ಣಾ ನದಿಗೆ 1,400 ಕ್ಯುಸೆಕ್ ನೀರು ಬಿಡುಗಡೆ

Published 30 ಜೂನ್ 2023, 15:50 IST
Last Updated 30 ಜೂನ್ 2023, 15:50 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ 1,400 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದ್ದು, ತಾಲ್ಲೂಕಿನ ಮಾಂಜರಿ ದಾಟಿ ನೀರು ರಾಯಬಾಗ ತಾಲ್ಲೂಕು ಪ್ರವೇಶಿಸಿದೆ.

ರಾಜಾಪುರ ಬ್ಯಾರೇಜ್‌ನಲ್ಲಿ ಮಳೆ ನೀರು ಸಂಗ್ರಹವಾಗಿಲ್ಲ. ಬ್ಯಾರೇಜ್ ಗೇಟ್‌ಗಳನ್ನು ತೆರೆದು ಹಿನ್ನೀರು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಇದರಿಂದ ಅಥಣಿ ತಾಲ್ಲೂಕಿನ ಜೂಗೂಳ, ಮಂಗಾವತಿ, ತಾಲ್ಲೂಕಿನ ಚಂದೂರ, ಚಂದೂರಟೇಕ್, ಯಡೂರ, ಕಲ್ಲೋಳ, ಅಂಕಲಿ, ಮಾಂಜರಿ ಗ್ರಾಮಗಳ ನದಿ ದಂಡೆಯ ರೈತರಿಗೆ ಅನುಕೂಲವಾಗಲಿದೆ.

ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಬತ್ತಿ ಬರಡಾಗಿದ್ದ ಕೃಷ್ಣಾ ನದಿಯಲ್ಲಿ ಕೊಂಚ ನೀರು ಹರಿದು ಬರುತ್ತಿರುವುದರಿಂದಲೂ ರೈತರು ಸಂತಸಗೊಂಡಿದ್ದಾರೆ. ಕನಿಷ್ಠ ಜಾನುವಾರುಗಳಿಗಾದರೂ ನೀರಿನ ಸಮಸ್ಯೆ ನಿಗಲಿದೆ. ಮಹಾರಾಷ್ಟ್ರ ಸರ್ಕಾರ ಇನ್ನೂ ಹೆಚ್ಚಿನ ನೀರು ಬಿಡುಗಡೆ ಮಾಡಿಬೇಕು ಎಂದು ರೈತರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT