ಬೆಳಗಾವಿ: ನಗರದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ಭಾನುವಾರ ಸುಗಮವಾಗಿ ನಡೆಯಿತು.

ಬೆಳಗಾವಿಯಲ್ಲಿ ಪರೀಕ್ಷೆಗಾಗಿ 17 ಕೇಂದ್ರಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಸಮಯ ನಿಗದಿಪಡಿಸಲಾಗಿತ್ತು. 6,757 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 6,171 ಅಭ್ಯರ್ಥಿಗಳು ಹಾಜರಾದರೆ, 586 ಮಂದಿ ಗೈರು ಹಾಜರಾಗಿದ್ದರು.

‘ಮಂಗಳಸೂತ್ರ, ಕಾಲುಂಗರ ಹೊರತುಪಡಿಸಿ, ಮಹಿಳೆಯರು ಧರಿಸಿದ್ದ ಲೋಹದ ಆಭರಣ ತೆಗೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟೆವು. ನಮ್ಮಲ್ಲಿ ಪರೀಕ್ಷೆ ಸುಗಮವಾಗಿ ನಡೆದಿದ್ದು, ಯಾವುದೇ ಗೊಂದಲ ತಲೆದೋರಿಲ್ಲ’ ಎಂದು ಡಿಡಿಪಿಯು ಎಂ.ಎಂ.ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.