ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ ಪ್ರತ್ಯೇಕ ಜಿಲ್ಲೆಯಾಗಲಿ: ಸವದಿ

Published 16 ನವೆಂಬರ್ 2023, 14:00 IST
Last Updated 16 ನವೆಂಬರ್ 2023, 14:00 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ವಿಭಜನೆಯಾಗಿ ಅಥಣಿ ಪ್ರತ್ಯೇಕ ಜಿಲ್ಲೆಯಾಗಲಿ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಥಣಿ ತಾಲ್ಲೂಕಿನ ಕೊನೆಯ ಹಳ್ಳಿಗಳ ಜನರು ಬೆಳಗಾವಿಗೆ ಬರಲು 200 ಕಿ.ಮೀ ಕ್ರಮಿಸಬೇಕಿದೆ. ಚಿಕ್ಕೋಡಿ, ಗೋಕಾಕ ಮತ್ತು ಬೈಲಹೊಂಗಲದವರಿಂದ ಪ್ರತ್ಯೇಕ ಜಿಲ್ಲೆ ಬೇಡಿಕೆಯಿದೆ. ಇವರ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬ ಪರಿಸ್ಥಿತಿ ನಮ್ಮದಾಗಿದೆ. ಹಾಗಾಗಿ ರಾಯಬಾಗ, ಅಥಣಿ, ಕಾಗವಾಡ, ಕುಡಚಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ತೇರದಾಳ ಕ್ಷೇತ್ರಗಳನ್ನು ಒಳಗೊಂಡ ಅಥಣಿ ಜಿಲ್ಲೆ ರಚಿಸಬೇಕು. ಬೆಳಗಾವಿಯ ಅಧಿವೇಶನದಲ್ಲಿ ಆರು ಕ್ಷೇತ್ರದ ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದರೆ, ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT