ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದಿಂದ ಇಂದು ಮಂತ್ರಿಯಾಗಿದ್ದೇನೆ. ರಾಜ್ಯದ 1.28 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ನೀಡಿ, ಸೇವೆ ಮಾಡುವ ಅವಕಾಶ ಸಿಕ್ಕಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಅತವಾಡ ಕಾಂಗ್ರೆಸ್ ಕಮಿಟಿ, ವಿವಿಧ ಸಂಘಟನೆಗಳು, ಗ್ರಾಮ ಪಂಚಾಯಿತಿ ಸದಸ್ಯರು ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ನಾನು ಬದ್ದನಾಗಿದ್ದೇನೆ. ಈಗಾಗಲೇ ಈ ಕುರಿತ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಇಷ್ಟರಲ್ಲೇ ಚಾಲನೆ ನೀಡಲಾಗುವುದು’ ಎಂದರು.

ಗ್ರಾಮದಲ್ಲಿ ತೆರೆದ ಜಿಮ್ ಅನ್ನೂ ಅವರು ಇದೇ ವೇಳೆ ಉದ್ಘಾಟಿಸಿದರು. ಮಾರುತಿ ಬೆಳಗಾಂವ್ಕರ್, ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ವಸಂತ ಕಣಬರ್ಕರ್, ಕಲ್ಲಪ್ಪ ಕಡೋಲ್ಕರ್, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಕಾಂಬಳೆ, ಶುಭಾಂಗಿ ಪಾಟೀಲ, ನಾರಾಯಣ ಎಮ್, ಬಾಳು ಪಾಟೀಲ, ವಸಂತ ಪಾಟೀಲ, ಸಾತೇರಿ ಕಡೋಲ್ಕರ್, ಸಾತೇರಿ ಪಾಟೀಲ, ಅಶೋಕ ಪಾಟೀಲ, ಸೋಮನಾಥ್ ಪಾಟೀಲ, ನಾರಾಯಣ ಪಾಟೀಲ ಹಾಗೂ ಗ್ರಾಮದ ನೂರಾರು ಮಹಿಳೆಯರು ಇದ್ದರು.

ಸತ್ಕಾರ: ಸಮೃದ್ಧ ವಿಕಲಚೇತನರ ಸಂಸ್ಥೆಯ ವತಿಯಿಂದ ಶುಕ್ರವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಪ್ರಶಾಂತ್ ಪೋತದಾರ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.