ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔಜೀಕರ ಆಶ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ

Published 19 ಜೂನ್ 2024, 14:54 IST
Last Updated 19 ಜೂನ್ 2024, 14:54 IST
ಅಕ್ಷರ ಗಾತ್ರ

ಹುಕ್ಕೇರಿ: ಪಟ್ಟಣದ ಹೊರವಲಯ ಕ್ಯಾರಗುಡ್ ಬಳಿಯ ಔಜೀಕರ ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ ಬುಧವಾರ ನೀಡಿದರು.

ಮಠದ ಪೀಠಾಧಿಪತಿ ಮಲ್ಲಪ್ಪ ಮಹಾರಾಜರು, ಮಠದ ಅಭಿನವ ಮಂಜುನಾಥ ಸ್ವಾಮೀಜಿ ಅವರು ಸಚಿವ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿದ ಸಚಿವರು, ’ಧಾರ್ಮಿಕ ಪರಂಪರೆ ಉಳಿಸಿ ಬೆಳೆಸುವಲ್ಲಿ ಈ ಆಶ್ರಮ ಅಮೂಲ್ಯ ಕೊಡುಗೆ ನೀಡುತ್ತಿದೆ. ಸಮಾಜದ ಬೆಳವಣಿಗೆಗೆ ಮತ್ತು ಧರ್ಮ ಪ್ರಸಾರದಲ್ಲಿ ಶ್ರೀಮಠವು ತೊಡಗಿಸಿಕೊಂಡಿರುವುದು ಅತ್ಯಂತ ಸಮಂಜಸ. ಮಠದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಆಪ್ತ ಸಹಾಯಕ ಪಾಂಡು ಮಣ್ಣಿಕೇರಿ, ಮುಖಂಡರಾದ ರೋಹಿತ್ ಚೌಗಲಾ, ಕಿರಣ ರಜಪೂತ, ಬಾಹುಬಲಿ ಸೊಲ್ಲಾಪುರೆ, ರವಿ ಸನದಿ, ಸತೀಶ ದಿನ್ನಿಮನಿ, ರಾಹುಲ ತಳವಾರ, ಅಮರ ಬಿರ್ಡೆ, ಶೀತಲ್ ಮಠಪತಿ, ಆನಂದ ಜಿರ್ಲಿ, ಪ್ರಕಾಶ ಪಟ್ಟಣಶೆಟ್ಟಿ, ಇರ್ಷಾದ್ ಮೊಕಾಶಿ, ಕಬೀರ್ ಮಲೀಕ್ ಇತರರು ಇದ್ದರು.

ಹುಕ್ಕೇರಿ ಪಟ್ಟಣದ ಹೊರವಲಯದ ಔಜೀಕರ ಮಠಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದಾಗ ಪೀಠಾಧಿಪತಿ ಮಲ್ಲಪ್ಪ ಮಹಾರಾಜ್ ಮತ್ತು ಅಭಿನವ ಮಂಜುನಾಥ್ ಸ್ವಾಮೀಜಿ ಸತ್ಕರಿಸಿದರು
ಹುಕ್ಕೇರಿ ಪಟ್ಟಣದ ಹೊರವಲಯದ ಔಜೀಕರ ಮಠಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದಾಗ ಪೀಠಾಧಿಪತಿ ಮಲ್ಲಪ್ಪ ಮಹಾರಾಜ್ ಮತ್ತು ಅಭಿನವ ಮಂಜುನಾಥ್ ಸ್ವಾಮೀಜಿ ಸತ್ಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT