ಮೂಡಲಗಿ: ‘ಮೂಡಲಗಿಯಲ್ಲಿ ನೂತನ ನ್ಯಾಯಾಲಯ ಆರಂಭವಾಗುವುದರಿಂದ ತಾಲ್ಲೂಕಿನ ಜನರಿಗೆ ಸುಗಮವಾಗಿ ನ್ಯಾಯ ದೊರಕಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದು ಕರ್ನಾಟಕದ ಹೈಕೋರ್ಟ್ ಹಾಗೂ ಬೆಳಗಾವಿಯ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶೆ ಕೆ.ಎಸ್.ಮುದಗಲ ಹೇಳಿದರು.

ಬೆಳಗಾವಿಯ ನ್ಯಾಯಾಂಗ ಇಲಾಖೆ ಹಾಗೂ ಮೂಡಲಗಿಯ ವಕೀಲರ ಸಂಘದ ಸಹಯೋಗದಲ್ಲಿ ಮೂಡಲಗಿಯಲ್ಲಿ ನ್ಯಾಯಾಲಯದ ಉದ್ಘಾಟನೆಯನ್ನು ಸೋಮವಾರ ವರ್ಚವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಉತ್ತಮ ಸಹಕಾರದಿಂದ ನ್ಯಾಯಾಲಯದ ಕಾರ್ಯಕಲಾಪಗಳು ಸುಗಮವಾಗಿ ನಡೆಯಲು ಸಾಧ್ಯ’ ಎಂದರು.

‘ಕೇವಲ ಕಾನೂನು ಪದವಿ ಪಡೆದುಕೊಂಡು ವಕೀಲ ವೃತ್ತಿಗೆ ಬಂದರೆ ಸಾಲದು, ಕಾನೂನು ಬಗ್ಗೆ ನಿರಂತರವಾದ ಅಧ್ಯಯನ ಹಾಗೂ ಹಿರಿಯ ಅನುಭವಿ ವಕೀಲರ ಮಾರ್ಗದರ್ಶದಲ್ಲಿ ವ್ಯಾಜ್ಯ ನಡೆಸುವ ಮೂಲಕ ಕಾನೂನು ಮತ್ತು ನ್ಯಾಯಾಲಯದ ಗೌರವ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

ಬೆಳಗಾವಿಯ ನ್ಯಾಯಾಧೀಶ ಮಂಜುನಾಥ ನಾಯಕ ಮಾತನಾಡಿ, ‘ಮೂಡಲಗಿಯಲ್ಲಿ ನ್ಯಾಯಾಲಯ ಪ್ರಾರಂಭವಾಗುವಲ್ಲಿ ವಿವಿಧ ಅವಧಿಯ ವಕೀಲರ ಸಂಘದ ಪದಾಧಿಕಾರಿಗಳ ಪರಿಶ್ರಮ ಶ್ಲಾಘನೀಯ’ ಎಂದರು.

ಮೂಡಲಗಿಯ ನ್ಯಾಯಾಧೀಶೆ ಶಾಂತಮ್ಮಾ ಮಲ್ಲಿಕಾರ್ಜುನ ಪಿ.ವೇದಿಕೆಯಲ್ಲಿದ್ದರು.

ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಭಾಗೋಜಿ, ಉಪಾಧ್ಯಕ್ಷ ಎಲ್.ಬಿ. ವಡೆಯರ, ಪದಾಧಿಕಾರಿಗಳಾದ ಎಲ್.ಎಸ್. ಯಡ್ರಾಂವಿ, ಎಚ್.ವೈ. ಸಣ್ಣಕ್ಕಿ, ಜ್ಯೋತಿ ಕುಡತೆ ಇದ್ದರು.

ಹಿರಿಯ ವಕೀಲ ಉದಯ ಆರ್. ಜೋಕಿ ಪ್ರಾಸ್ತಾವಿಕ ಮಾತನಾಡಿದರು, ವಕೀಲ ಆರ್.ಎಸ್. ತೋಳಮರಡಿ ಸ್ವಾಗತಿಸಿದರು, ವಕೀಲ ಲಕ್ಷ್ಮಣ ಅಡಿಹುಡಿ ನಿರೂಪಿಸಿದರು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್. ಕೌಜಲಗಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.