ಬೈಲಹೊಂಗಲ: ನಾಡಿಗೆ ಮೂರುಸಾವಿರ ಮಠದ ಕೊಡುಗೆ ಅಪಾರವಿದೆ ಎಂದು ದೇವರಶೀಗಿಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಹೇಳಿದರು.

ನಗರದ ಮೂರುಸಾವಿರ ಮಠದಲ್ಲಿ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹೊಸೂರು- ಬೈಲಹೊಂಗಲ ಇತಿಹಾಸದ ಪುಟಗಳಲ್ಲಿ ಮೂರುಸಾವಿರಮಠ 900 ವರ್ಷಗಳ ಇತಿಹಾಸ ಹೊಂದಿದೆ. ಮಠದ ಉಸ್ತುವಾರಿಯನ್ನು ಇದುವರೆಗೆ 17 ಸ್ವಾಮೀಜಿಗಳು ವಹಿಸಿದ್ದರು. 16ನೇ ಪೀಠಾಧಿಕಾರಿಯಾಗಿ ಬಂದ ಗಂಗಾಧರ ಸ್ವಾಮೀಜಿ 25 ವರ್ಷಗಳಲ್ಲಿ ಒಟ್ಟು 30 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬೈಲಹೊಂಗಲ ನಾಡಿನಲ್ಲಿ ಪ್ರಥಮ ಬಾರಿಗೆ ಶಿಕ್ಷಣ ಕ್ರಾಂತಿಗೆ ಭದ್ರಬುನಾದಿ ಹಾಕಿದರು. ಬಡ, ಮಧ್ಯಮ ವರ್ಗದವರ ಜೀವನವನ್ನು ಬೆಳಗಿಸಿದ ಕೀರ್ತಿ ಗಂಗಾಧರ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದರು.

ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ವಿಶ್ವನಾಥ ಹಿರೇಮಠ ಮಾತನಾಡಿ, ಲಿಂಗೈಕ್ಯ ಗಂಗಾಧರ ಸ್ವಾಮೀಜಿ ಅವರು ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಕಾಲೇಜುಗಳು, ಪದವಿ ಕಾಲೇಜು, ಐಟಿಐ ಕಾಲೇಜು, ನರ್ಸಿಂಗ್ ಕಾಲೇಜು, ಮೆಡಿಕಲ್ ಸಂಶೋಧನಾ ಕೇಂದ್ರ, ಬೆಳಗಾವಿ, ಧಾರವಾಡ, ಬೈಲಹೊಂಗಲ ಹಾಗೂ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಯುವ ಧುರೀಣ ಗುರು ಮೆಟಗುಡ್ಡ, ವೈದ್ಯ ಎ.ಎನ್.ಬಾಳಿ, ಗಣ್ಯರಾದ ಮಹಾಂತೇಶ ಅಕ್ಕಿ, ಶಿವಬಸಪ್ಪ ತುರಮರಿ, ಮಡಿವಾಳಪ್ಪ ಹೋಟಿ, ವೀರನಗೌಡ ಸಂಗನಗೌಡ್ರ, ಮಹಾಂತೇಶ ಅವರಾದಿ, ಬಾಳಣ್ಣ ಶಿವಬಸಣ್ಣವರ, ಡಾ.ಎಂ.ವಿ.ಸಂಗೊಳ್ಳಿ, ಶಂಕ್ರೆಪ್ಪ ಸಿದ್ನಾಳ, ಪ್ರಶಾಂತ ಜಕಾತಿ, ಬಿ.ಎಂ.ಹಿರೇಮಠ, ಮಹಾಂತೇಶ ಕಮತ, ಈಶ್ವರ ನಂದೆಣ್ಣವರ, ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ನಿರ್ದೇಶಕರಾದ ಸಿ.ಎಸ್.ಭಾಂವಿಹಾಳ, ಆರ್.ಜಿ.ಹಿರೇಮಠ, ಎಸ್.ಯು.ಹುಲೆಪ್ಪನವರಮಠ, ನಿವೃತ್ತ ಶಿಕ್ಷಕರಾದ ಆರ್.ಎನ್.ಕೊಳ್ಳಿ, ಎಂ.ಪಿ.ತಿಪ್ಪಿಮಠ, ಪರವಯ್ಯ ಪೂಜೇರ ಆಗಮಿಸಿದ್ದರು. ಅಣ್ಣನ ಬಳಗ, ಅಕ್ಕನ ಬಳಗ, ಗಂಗಾಂಭಿಕಾ ಬಳಗ, ಮುಕ್ತಾಯಕ್ಕನ ಬಳಗದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.