ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲದ ಗಲಾಟೆ ವಿಷಯ ಪ್ರಸ್ತಾಪಿಸಿದ ಮೋದಿ ವಿರುದ್ಧ ಸತೀಶ ಜಾರಕಿಹೊಳಿ ಆಕ್ರೋಶ

Published : 15 ಸೆಪ್ಟೆಂಬರ್ 2024, 10:02 IST
Last Updated : 15 ಸೆಪ್ಟೆಂಬರ್ 2024, 10:02 IST
ಫಾಲೋ ಮಾಡಿ
Comments

ಬೆಳಗಾವಿ: ಮಂಡ್ಯ ಜಿಲ್ಲೆಯ ನಾಗಮಂಗಲದ ಗಲಾಟೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಕುರಿತು ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ಈ ವಿಷಯ ಬಿಟ್ಟು ಅವರಿಗೆ ಬೇರೆ ಏನಾದರೂ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 60 ಸಾವಿರ ಗಣಪನ ಮೂರ್ತಿಗಳಿವೆ. ಒಂದು ಕಡೆ ಆಕಸ್ಮಿಕವಾಗಿ ಇಂಥ ಘಟನೆ ನಡೆದಿರಬಹುದು. ಪೊಲೀಸರು ಆ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುತ್ತಾರೆ. ಇವರ‍್ಯಾಕೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

‘ಬಾಯಿಗೆ ಬಂದಂತೆ ಮಾತನಾಡಲು ಶಾಸಕ ಮುನಿರತ್ನ ಅವರಿಗೆ ನಾವು ಹೇಳಿದ್ದೇವಾ? ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನವರು ಹೇಳಿದ್ದರಾ’ ಎಂದು ಜಾರಕಿಹೊಳಿ ಪ್ರಶ್ನಿಸಿದರು.

‘ನನ್ನ ಬಂಧಿಸಲು ಕಾಂಗ್ರೆಸ್‌ ಪಿತೂರಿ ಮಾಡಿದೆ’ ಎಂಬ ಮುನಿರತ್ನ ಹೇಳಿಕೆಗೆ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದ ಅವರು, ‘ಮುನಿರತ್ನ ಬಂಧನದಲ್ಲಿ ದ್ವೇಷದ ರಾಜಕಾರಣವಿಲ್ಲ. ತರಾತುರಿಯಲ್ಲಿ ನಾವು ಯಾರನ್ನೂ ಬಂಧಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT