ಶನಿವಾರ, ಆಗಸ್ಟ್ 24, 2019
28 °C

ಕೆನರಾ ಬ್ಯಾಂಕ್‌ನಿಂದ ನಾಗರಪಂಚಮಿ ಆಚರಣೆ

Published:
Updated:
Prajavani

ಬೆಳಗಾವಿ: ಇಲ್ಲಿನ ಕೆನರಾ ಬ್ಯಾಂಕ್‍ ಪ್ರಾದೇಶಿಕ ಕಚೇರಿಯ ಸಿಬ್ಬಂದಿ ಸಂಭ್ರಮ–ಸಡಗರದಿಂದ ನಾಗರಪಂಚಮಿಯನ್ನು ಆಚರಿಸಿದರು.

ಮುಖ್ಯಅತಿಥಿಯಾಗಿದ್ದ ಸಂಪನ್ಮೂಲ ವ್ಯಕ್ತಿ ಪರಮೇಶ್ವರ ಹೆಗಡೆ ಮಾತನಾಡಿ, ‘ನಾಗಪಂಚಮಿಯೂ ನಾಡಿಗೆ ದೊಡ್ಡ ಹಬ್ಬವಾಗಿದೆ. ಭಾರತೀಯ ಸಂಸ್ಕೃತಿ ‍ಪ್ರಕಾರ, ಪ್ರತಿ ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ಇದನ್ನು ಯುವಪೀಳಿಗೆ ಅರಿತುಕೊಳ್ಳಬೇಕು. ಸಂಸ್ಕೃತಿಯನ್ನು ಉಳಿಸಿಕೊಂಡು, ಆಚರಣೆಗಳ ಮಹತ್ವವನ್ನು ಸಾರಬೇಕು’ ಎಂದು ತಿಳಿಸಿದರು.

ಕೆನರಾ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ಸಹಾಯಕ ಮುಖ್ಯ ವ್ಯವಸ್ಥಾಪಕ ಕೃಷ್ಣ ಕುಲಕರ್ಣಿ ಮಾತನಾಡಿ, ‘ಬ್ಯಾಂಕ್‌ನ ಕೆಲಸ ಕಾರ್ಯದಲ್ಲಿ  ತೊಡಗುವ ಸಿಬ್ಬಂದಿಗೆ ತಮ್ಮ ಕುಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಲು ಸಮಯ ಇರುವುದಿಲ್ಲ. ಆದ್ದರಿಂದ ಕಾರ್ಯಾಲಯದಲ್ಲೇ ಸಿಬ್ಬಂದಿಯು ಕುಟುಂಬದಂತೆ ಹಬ್ಬಗಳನ್ನು ಆಚರಿಸಿದ್ದೇವೆ’ ಎಂದರು.

 

Post Comments (+)