ಶನಿವಾರ, ಡಿಸೆಂಬರ್ 3, 2022
27 °C

‘ಹಿಂದೂ ಎಂಬುದು ಜಗತ್ತಿನ ಪ್ರಾಚೀನ ಸಂಸ್ಕೃತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಮಕನಮರಡಿ (ಬೆಳಗಾವಿ): ‘ಹಿಂದೂ ಎನ್ನುವುದು ಜಗತ್ತಿನ ಪ್ರಾಚೀನ ಸಂಸ್ಕೃತಿ ಎಂದು ಡಾ.ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ಅವರ ಹೆಸರು ಹೇಳಿಕೊಂಡು ಬೆಳೆದವರು ಅರ್ಥ ಮಾಡಿಕೊಳ್ಳಿ’ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿ ಬುಧವಾರ ಆಯೋಜಿಸಿದ್ದ ‘ನಾನೂ ಹಿಂದೂ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹಿಂದೂ ಧರ್ಮವನ್ನು ನುಂಗಬೇಕು ಎಂದು ಬಂದಿದ್ದ ರಾಕ್ಷಸರಾಜ ರಾವಣ,ಕಂಸರನ್ನು ಈ ಧರ್ಮವೇ ನುಂಗಿದೆ. ಘೋರಿ- ಘಜನಿಯಂಥ ಆಕ್ರಮಿಗಳನ್ನು ನುಂಗಿದೆ. ಬಾಬರ್‌ನಿಂದ ಹಿಡಿದು ಔರಂಗಜೇಬನ ವರೆಗೆ ಟಿಪ್ಪು ಸುಲ್ತಾನನಿಂದ ಹಿಡಿದು ಹಜರತನವರೆಗೆ ಎಲ್ಲರನ್ನೂ ಹಿಂದೂ ಧರ್ಮ ಹೊಸಕಿಹಾಕಿದೆ. ಇನ್ನು ಈ ಕೊತವಾಲಗಳು, ಸಾವಕಾರಗಳು ಯಾವ ಲೆಕ್ಕ’ ಎಂದರು.

‘ಈಗೀಗ ಚರ್ಚ್‌ಗಳ ಮುಂದೆ ಗರುಡ ಗಂಬಗಳು ಬಂದಿವೆ. ಉರುಳು ಸೇವೆ, ಜಾತ್ರೆ ಆರಂಭಿಸುವ ಮೂಲಕ ಸ್ವತಃ ಚರ್ಚ್‌ಗಳು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿವೆ’ ಎಂದರು.

ಹಿರೇಹಡಗಲಿಯ ಹಾಲಸಂಸ್ಥಾನ ಮಠದ ಅಭಿನವ ಹಾಲಸ್ವಾಮೀಜಿ, ಹುಕ್ಕೇರಿಯ ಕ್ಯಾರಗುಡ್ಡ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಠಗಿ,
ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ನಾಯಕ್, ಬಿಜೆಪಿ ಚಿಕ್ಕೋಡಿ ಘಟಕ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ, ಎಸ್ಟಿ ಘಟಕ ಅಧ್ಯಕ್ಷ ಬಸವರಾಜ ಹುಂದ್ರಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು