ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಪ್ಪಾಣಿ | ಯುದ್ಧವಿಮಾನಕ್ಕೆ ಅಗೌರವ: ಆರೋಪ

Published 7 ಜುಲೈ 2024, 14:55 IST
Last Updated 7 ಜುಲೈ 2024, 14:55 IST
ಅಕ್ಷರ ಗಾತ್ರ

ನಿಪ್ಪಾಣಿ: ‘ದೇಶಾಭಿಮಾನ ಜಾಗೃತಗೊಳಿಸುವ ನಿಟ್ಟಿನಲ್ಲಿ ನಗರದ ಪ್ರವೇಶ ದ್ವಾರದ ಬಳಿ ಅಳವಡಿಸಿದ್ದ ಯುದ್ಧವಿಮಾನಕ್ಕೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಅಗೌರವ ತೋರಿದ್ದಾರೆ’ ಎಂದು ನಗರಸಭೆ  ಸದಸ್ಯ ಜಯವಂತ ಭಾಟಲೆ ಆರೋಪಿಸಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘46 ವರ್ಷಗಳು ಸೇನೆಯಲ್ಲಿ ಸೇವೆಗೆ ಬಳಕೆಯಾಗಿದ್ದ ಈ ವಿಮಾನವನ್ನು ಸ್ಕ್ರ್ಯಾಪ್ ಎಂದು ನಿಂದಿಸಿದ್ದು ಸರಿಯಲ್ಲ’ ಎಂದರು.

ನಗರಸಭೆ ಸದಸ್ಯ ರಾಜೇಂದ್ರ ಗುಂದೇಶಾ, ನೀತಾ ಬಾಗಡೆ, ಸಂತೋಷ ಸಾಂಗಾವಕರ, ಸುಭಾಷ ಕದಮ, ಸುರಜ ಖವರೆ, ರಮೇಶ ವೈದ್ಯ, ಬಂಡಾ ಘೋರ್ಪಡೆ, ಸಾಗರ ಮಿರ್ಜೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT