ನಿಪ್ಪಾಣಿ: ಸಮೀಪದ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಮೇತಕೆ ಗ್ರಾಮದಲ್ಲಿ ಫೆ.28ರ ವರೆಗೆ ಸಂತ ಬಾಳುಮಾಮಾ ಮತ್ತು ಸಂತ ಹಾಲಸಿದ್ಧನಾಥ ದೇವರ ಭಂಡಾರ ಉತ್ಸವ ನಡೆಯಲಿದೆ.

ನಿತ್ಯ ಬೆಳಿಗ್ಗೆ 4.30ಕ್ಕೆ ಕಾಕಡ ಆರತಿ, 7ಕ್ಕೆ ಜ್ಞಾನೇಶ್ವರಿ ಪಾರಾಯಣ, ಸಂಜೆ 4ಕ್ಕೆ ಹರಿಪಾಠ, 6ಕ್ಕೆ ಪ್ರವಚನ, 7ಕ್ಕೆ ಆರತಿ, 7.30ಕ್ಕೆ ಕೀರ್ತನೆ ನಂತರ ಮಹಾಪ್ರಸಾದ ಹಾಗೂ ಭಜನೆ ಕಾರ್ಯಕ್ರಮ ನಡೆಯುತ್ತವೆ.

ಫೆ.27ರಂದು ಬೆಳಿಗ್ಗೆ 10ಕ್ಕೆ ಮಾವುಲಿ ಅಶ್ವರಿಂಗಣ ಉತ್ಸವ ಆಯೋಜಿಸಲಾಗಿದೆ. ಫೆ.28ರಂದು ಬೆಳಿಗ್ಗೆ 8.30ಕ್ಕೆ ಜ್ಞಾನೇಶ್ವರಿ ಪಾರಾಯಣ ಸಮಾಪ್ತಿ, 9ಕ್ಕೆ ಶಶಿಕಾಂತ ಗುರವ ಮಹಾರಾಜ ಚೌಂಡಾಲ ಅವರಿಂದ ʼಕಾಲ್ಯಾಚೆ ಕೀರ್ತನʼ, 10ಕ್ಕೆ ನೈವೇದ್ಯ ಮತ್ತು ಮಹಾಪ್ರಸಾದ ಹಾಗೂ ಸಂಜೆ 5.30ಕ್ಕೆ ದಿಂಡಿ ಕಾರ್ಯಕ್ರಮ ಜರುಗಲಿದೆ.

ಈ ಭಂಡಾರ ಉತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಬಂದು ಸಂತರ ದರ್ಶನ ಪಡೆಯುತ್ತಿರುವುದು ಉತ್ಸವದ ವಿಶೇಷತೆಯಾಗಿದೆ.

ಗಮನ ಸೆಳೆದ ಮಹಿಳಾ ಭಜನಿ ಮಂಡಳ: ಇಚಲಕರಂಜಿಯ ಜಿವ್ಹಾಯಿ ಮಹಿಳಾ ಭಜನೆ ಮಂಡಳಿಯಿಂದ ನೃತ್ಯದೊಂದಿಗೆ ಭಜನೆ ಎಲ್ಲ ಭಕ್ತಾದಿಗಳ ಜನೆಮನ ಸೆಳೆಯಿತು. ಸಂತ ಬಾಳುಮಾಮಾ ಅವರ ಇತಿಹಾಸ ಸಾರುವ ಕೆಲ ಭಜನೆಗಳನ್ನು ಸಾದರಪಡಿಸಿ ಭಜನೆ ಮಂಡಳದ ಸದಸ್ಯೆಯರು ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.