ಸೋಮವಾರ, ಅಕ್ಟೋಬರ್ 21, 2019
23 °C

‘ಮೌಲ್ಯ ತುಂಬುವಲ್ಲಿ ಎನ್‌ಎಸ್‌ಎಸ್‌ ಸಹಕಾರಿ’

Published:
Updated:
Prajavani

ಬೆಳಗಾವಿ: ‘ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ತುಂಬುವಲ್ಲಿ ಎನ್‌ಎಸ್‌ಎಸ್‌ ಚಟುವಟಿಕೆಗಳು ಸಹಕಾರಿಯಾಗಿವೆ’ ಎಂದು ರಾಷ್ಟ್ರೀಯ ಸೇವಾ ಯೋಜನೆ ಪ್ರಾದೇಶಿಕ ನಿರ್ದೇಶಕ ಖಾದ್ರಿ ನರಸಿಂಹಯ್ಯ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಎನ್.ಎಸ್.ಎಸ್. ಸುವರ್ಣ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯುವಜನರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿಯನ್ನು ಎನ್‌ಎಸ್‌ಎಸ್‌ ನಿರ್ವಹಿಸುತ್ತಿದೆ. ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿರುವ ಯುವಪಡೆ ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದೆ’ ಎಂದರು.

ಎನ್.ಎಸ್.ಎಸ್. ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಜೋಗಿ, ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಎಂ. ರಾಮಚಂದ್ರಗೌಡ ಮಾತನಾಡಿದರು.

ಕುಲಸಚಿವ ಬಸವರಾಜ ಪದ್ಮಶಾಲಿ ಸ್ವಾಗತಿಸಿದರು. ಸಂಯೋಜಕ ಎಸ್.ಒ. ಹಲಸಗಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ನಿರೂಪಿಸಿದರು. ನಂದಿನಿ ದೇವರಮನಿ ವಂದಿಸಿದರು.

Post Comments (+)