ಗುರುವಾರ , ಸೆಪ್ಟೆಂಬರ್ 23, 2021
20 °C

ಆನ್‌ಲೈನ್ ತರಗತಿ: ಅನ್ಯರನ್ನು ಸೇರಿಸದಿರಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಆನ್‌ಲೈನ್‌ ತರಗತಿಗಳಲ್ಲಿ ಅನ್ಯರು ಹಾಜರಾಗದಂತೆ ಶಾಲೆ–ಕಾಲೇಜುಗಳವರು ಅಥವಾ ಶಿಕ್ಷಣ ಸಂಸ್ಥೆಗಳವರು ನಿಗಾ ವಹಿಸುವಂತೆ ಡಿಸಿಪಿ ವಿಕ್ರಂ ಅಮಟೆ ಸೂಚಿಸಿದ್ದಾರೆ.

‘ಆನ್‌ಲೈನ್‌ ತರಗತಿಗಳು ನಡೆಯುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರ ಬಗ್ಗೆ ‘ಚಾಟ್‌ ಬಾಕ್ಸ್‌’ನಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳನ್ನು ಬಳಸುವುದು ಮತ್ತು ನಿಂದಿಸುವ ಬಗ್ಗೆ ದೂರುಗಳು ಬಂದಿವೆ. ಹೆಣ್ಮಕ್ಕಳ ಹೆಸರಿನಲ್ಲಿ ಅಸಭ್ಯವಾದ ವಿಡಿಯೊಗಳನ್ನು ಹರಿಬಿಡುತ್ತಿರುವ ಬಗ್ಗೆಯೂ ಸಿಇಎನ್‌ ಅಪರಾಧ ಠಾಣೆಗೆ ದೂರುಗಳು ಬಂದಿವೆ. ಹೀಗಾಗಿ, ಎಚ್ಚರ ವಹಿಸಬೇಕು’ ಎಂದು ತಿಳಿಸಿದ್ದಾರೆ.

‘ಸಿಸ್ಟಂ ಅಡ್ಮಿನ್‌ಗಳು ತಮ್ಮ ಶಾಲೆ ಅಥವಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯವರು ಹಾಜರಾಗದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಹಾಜರಾದಲ್ಲಿ ಅಂಥವರನ್ನು ಕೂಡಲೇ ತೆಗೆದುಹಾಕಬೇಕು (ರಿಮೂವ್). ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.