ಬುಧವಾರ, ನವೆಂಬರ್ 20, 2019
21 °C

‘ಗಿಡಗಳನ್ನು ಬೆಳೆಸಿದರೆ ತಾಪಮಾನ ತಗ್ಗಿಸಬಹುದು’

Published:
Updated:
Prajavani

ಅಥಣಿ: ‘ಗಿಡ, ಮರಗಳನ್ನು ಬೆಳೆಸುವುದರಿಂದ ತಾಪಮಾನ ಪ್ರಮಾಣ ತಗ್ಗಿಸಬಹುದಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ತಿಳಿಸಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್ಎಸ್‌ಎಂಎಸ್ ಕಾಲೇಜಿನಲ್ಲಿ ಗುರುವಾರ ‘ಇಕೊ ಕ್ಲಬ್‌’ನಿಂದ ಹಮ್ಮಿಕೊಂಡಿದ್ದ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಓಝೋನ್‌ ಪದರ ರಕ್ಷಿಸುವ ಜವಾಬ್ದಾರಿ ಎಲ್ಲರದಾಗಿದೆ. ಆದರೆ, ಅದನ್ನು ಅರಿತಿಲ್ಲದಿರುವುದು ವಿಷಾದನೀಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಫ್. ಇಂಚಲ ಮಾತನಾಡಿ, ‘ವಿಷಾನಿಲದಿಂದಾಗಿ ಓಝೋನ್‌ ಪದರ ಕ್ಷೀಣಿಸುತ್ತಿದೆ’ ಎಂದು ತಿಳಿಸಿದರು.

ಕಾಲೇಜು ಒಕ್ಕೂಟದ ಉಪಾಧ್ಯಕ್ಷರಾದ ಡಾ.ಕೆ.ಆರ್. ಸಿದ್ದಗಂಗಮ್ಮ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಸ್.ಕೆ. ಸಜ್ಜನ ಇದ್ದರು.

ಎಂ.ಎನ್. ಕುಳ್ಳೋಳ್ಳಿ ಪರಿಚಯಿಸಿದರು. ಶಾರದಾ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಫೂರ್ತಿ ಅಥಣಿ ನಿರೂಪಿಸಿದರು. ಪ್ರೀತಿ ಪಾಟೀಲ ವಂದಿಸಿದರು.

 

 

ಪ್ರತಿಕ್ರಿಯಿಸಿ (+)