ಗುರುವಾರ , ಆಗಸ್ಟ್ 11, 2022
26 °C

ಗಿಳಿ ಮಾರಾಟ: ಆರೋಪಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಪಾಟೀಲ ಮಾಳದಲ್ಲಿ ಶನಿವಾರ ನಾಲ್ಕು ಗಿಳಿಗಳನ್ನು ಮಾರಾಟ ಮಾಡುತ್ತಿದ್ದ ಯುವಕನನ್ನು ಸ್ಥಳೀಯ ಅಕ್ವೇರಿಯಂ ಹಾಗೂ ಹಕ್ಕಿಗಳ ಮಾರಾಟ ಅಂಗಡಿಯವರು ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿದರು.

ನಗರದ ತಾಂಗಡಿ ಗಲ್ಲಿಯ ನಿವಾಸಿ ಆಕಾಶ ಗುರವ ಆರೋಪಿ. ಅವರೊಂದಿಗೆ ಬಂದಿದ್ದ ಮತ್ತೊಬ್ಬ ಯುವಕ ಪರಾರಿಯಾಗಿದ್ದಾನೆ.

‘ನಾನು ಲವ್ ಬರ್ಡ್ಸ್‌ ಮಾರುತ್ತಿದ್ದೆ. ಆದರೆ, ಗಿಳಿಗಳನ್ನು ಮಾರುವುದು ನಿಯಮಬಾಹಿರ ಎಂದು ತಿಳಿದಿರಲಿಲ್ಲ. ಹಾಗಾಗಿ ₹1 ಸಾವಿರದಿಂದ ₹1,200ಕ್ಕೆ ಒಂದು ಜೊತೆ ಗಿಳಿ ಮಾರುತ್ತಿದ್ದೆ. ಇನ್ನು ಮುಂದೆ ಈ ತಪ್ಪು ಮಾಡುವುದಿಲ್ಲ’ ಎಂದು ತಪ್ಪೊಪ್ಪಿಕೊಂಡಿದ್ದಾಗಿ, ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು