ನಿಪ್ಪಾಣಿ: ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 78ನೇ ಜನ್ಮದಿನಾಚರಣೆ ಅಂಗವಾಗಿ ಸ್ಥಳೀಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವಿಧ ಸಾಮಾಜಿಕ, ಶೈಕ್ಷಣಿಕ, ಪರಿಸರ ಸಂರಕ್ಷಣಾ ಹಾಗೂ ಜನಪರ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಕೆಎಲ್ಇ ಸಂಸ್ಥೆಯ ನಿರ್ದೇಶಕ ಪ್ರವೀಣ ಬಾಗೇವಾಡಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಶಸ್ತ್ರ ಪಡೆಗಳಲ್ಲಿ ಸೇರಬಯಸುವ ಆಕಾಂಕ್ಷಿಗಳಿಗೆ ತರಬೇತಿ ನೀಡುವ ಜಿ.ಐ.ಬಿ. ಡಿಫೆನ್ಸ್ ಅಕಾಡೆಮಿಗೆ ಚಾಲನೆ ನೀಡಲಾಯಿತು.

ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದಡಿಯಲ್ಲಿ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಎಲ್ಲ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು 50,000ಕ್ಕೂ ಅಧಿಕ ಪೇಪರ್ ಪ್ಯಾಕೆಟ್ಗಳನ್ನು ತಯಾರಿಸಿ, ರ್ಯಾಲಿಯಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಗರದ ವಿವಿಧ ಅಂಗಡಿಗಳಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ವಿತರಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಬಾಗೇವಾಡಿ ಕಾಲೇಜಿನ ಎನ್.ಎಸ್.ಎಸ್., ಎನ್.ಸಿ.ಸಿ., ರೋವರ್ ಮತ್ತು ರೆಂಜರ್ ಘಟಕಗಳು ಸ್ಥಳೀಯ ನಿತೀನಕುಮಾರ ಕದಮ ಕಿವುಡ ಮತ್ತು ಮೂಗ ಮಕ್ಕಳ ವಸತಿ ಶಾಲೆಯ ಮಕ್ಕಳಿಗಾಗಿ ಸಂಗ್ರಹಿಸಲ್ಪಟ್ಟ ₹15,000ಕ್ಕೂ ಹೆಚ್ಚು ಮೊತ್ತದಲ್ಲಿ ಬ್ಲ್ಯಾಂಕೆಟ್ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಿ ಶಿಕ್ಷಕಿಯರಾದ ಪಂಕಜ ಕದಮ, ದೀಪಾಲಿ ಮಾನೆ, ಜ್ಯೋತಿ ಮೆಂಡಗುಡಲೆ, ಮನಿಷಾ ಚೆಂಡಕೆ ಅವರ ಸಮ್ಮುಖದಲ್ಲಿ ಮಕ್ಕಳಿಗೆ ವಿತರಿಸಲಾಯಿತು.

ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ ಬಾಗೇವಾಡಿ, ಸದಸ್ಯರಾದ ಶಂಕರಗೌಡ ಪಾಟೀಲ, ಎಂ.ಆರ್. ಪಾಟೀಲ, ರವೀಂದ್ರ ಶೆಟ್ಟಿ, ಮಲ್ಲಿಕಾರ್ಜುನ ಗಡಕರಿ, ನಿವೃತ್ತ ಪ್ರಾಚಾರ್ಯ ಡಾ. ಎಂ.ಬಿ. ಕೋಥಳೆ, ಪ್ರಾಚಾರ್ಯ ಎಂ.ಎಂ. ಹುರಳಿ, ಪ.ಪೂ ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಶಂಕರಮೂರ್ತಿ ಕೆ.ಎನ್., ಎಸ್.ಎಂ. ರಾಯಮಾನೆ, ಎನ್.ಎಸ್.ಎಸ್. ಅಧಿಕಾರಿ ಸುಧೀರ ಕೋಠಿವಾಲೆ, ಸುನಿತಾ ಹುನ್ನರಗಿ, ಎನ್.ಸಿ.ಸಿ. ಅಧಿಕಾರಿ ಸಿದ್ದು ಉದಗಟ್ಟಿ, ಸ್ಕೌಟ್ ಗೈಡ್ಸ್ ಅಧಿಕಾರಿಗಳಾದ ಬಸವರಾಜ ಜನಗೌಡ ಹಾಗೂ ಶಶಿಧರ ಕುಂಬಾರ, ನಾಗರಾಜ ಬೆಳಗಾಂವಕರ, ಚಂದ್ರಪ್ರಕಾಶ ಸನದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.