ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಜಿಬಿಐಟಿ: ಬಿಇ ತರಗತಿ ಆರಂಭಕ್ಕೆ ಸಿದ್ಧತೆ

Last Updated 15 ಡಿಸೆಂಬರ್ 2020, 13:46 IST
ಅಕ್ಷರ ಗಾತ್ರ

ಬೆಳಗಾವಿ: ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್‌ಜಿಬಿಐಟಿಯಲ್ಲಿ 2020–21ನೇ ಸಾಲಿನ ಬಿ.ಇ. ಪ್ರಥಮ ವರ್ಷದ ಆನ್‌ಲೈನ್‌ ತರಗತಿಗಳು ಪ್ರಾರಂಭವಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮಂಗಳವಾರದಿಂದ ಡಿ. 21ರವರೆಗೆ ಹಮ್ಮಿಕೊಂಡಿರುವ ವಿವಿಧ ವಿಷಯಗಳ ಮಾಹಿತಿ ನೀಡುವ ಹಾಗೂ ವಿಭಾಗಗಳ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿದ್ದ ಹಾರೂಗೇರಿಯ ಜಂಬಗಿ ಸ್ಮಾರಕ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಡಾ.ಲಕ್ಷ್ಮಣ ಜಂಬಗಿ, ‘ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ದಿನದಲ್ಲಿ ಕನಿಷ್ಠ 5 ನಿಮಿಷವನ್ನಾದರೂ ಧ್ಯಾನಕ್ಕೆ ಮೀಸಲಿಡಬೇಕು. ಕೋವಿಡ್-19ನಿಂದಾಗಿ ಜೀವನಶೈಲಿಯೇ ಬದಲಾಗಿದ್ದು, ಸಾಕಷ್ಟು ಪಾಠ ಕಲಿಸಿದೆ. ಆದ್ದರಿಂದ, ಎಂಥದೇ ಪರಿಸ್ಥಿಯಲ್ಲಿಯೂ ಜೀವನ ಸಾಗಿಸುವುದನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಎಷ್ಟೇ ಅಭಿವೃದ್ಧಿ ಹೊಂದಿದರೂ, ಎಲ್ಲೇ ಇದ್ದರೂ ಮಾತೃ ಸಂಸ್ಥೆ ಮತ್ತು ಮಾತೃ ಭಾಷೆ ಮರೆಯಬಾರದು’ ಎಂದರು.

ಪ್ರಾಚಾರ್ಯ ಡಾ.ಸಿದರಾಮಪ್ಪ ವಿ. ಇಟ್ಟಿ, ‘ಹಿಂದೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಇಂದು ಶಿಕ್ಷಣಕ್ಕೆ ಮೊಬೈಲ್ ಬಳಕೆ ಅವಶ್ಯವಾಗಿದೆ. ಆದರೆ, ಬಳಕೆ ಇತಿಮಿತಿಯಲ್ಲಿರಬೇಕು’ ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್‌.ವಿ. ಮಾನ್ವಿ, ‘ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಅತಿಥಿಯಾಗಿದ್ದ ಪೂಜಾ ಹಿರೇಕೋಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಮಹೇಂದ್ರ ಬಿರಾದಾರ, ಶ್ರದ್ಧಾ ಮತ್ತಿಕಟ್ಟಿ, ಮಹೇಶ ಈಶ್ವರಪ್ಪಗೋಳ, ಅಭಿನಂದನ ನಸಾಲಪುರ ಮಾತನಾಡಿದರು.

ಸಿವಿಲ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಹರ್ಷಿತಾ ಹಾಗೂ ಮೇಘಾ ಸ್ವಾಗತ ಗೀತೆ ಹಾಡಿದರು. ಸಂಯೋಜನಾಧಿಕಾರಿ ಪ್ರೊ.ವಿವೇಕಾನಂದ ಖೋತ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಗಲಗಲಿ ವಿಭಾಗಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಮಂಜುನಾಥ ಶರಣಪ್ಪನವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT