ಭಾನುವಾರ, ಏಪ್ರಿಲ್ 2, 2023
32 °C

‘ಸರ್ವರಿಗೂ ಸಂವಿಧಾನ’ ನಾಟಕಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಂ.ಕೆ. ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಾಯಣ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಿರ್ಮಿಸುತ್ತಿರುವ ‘ಸರ್ವರಿಗೂ ಸಂವಿಧಾನ’ ಹಾಗೂ ಕೊರೊನಾ ಜಾಗೃತಿಗೆ ನಾಟಕಗಳ ಸಿದ್ಧತಾ ಶಿಬಿರ ಸಮೀಪದ ಅನುಭವ ಮಂಟಪದ ಮಂಗಲ ಕಾರ್ಯಾಲಯದಲ್ಲಿ ನಡೆಯುತ್ತಿದೆ.

‘ಮಾನವೀಯತೆಯು ಸಂವಿಧಾನದ ಮೂಲ ಮಂತ್ರವಾಗಿದೆ. ಸಂವಿಧಾನವೆಂದರೆ ವಿಧಿ ಹಾಗೂ ಉಪವಿಧಿಗಳ ಲೆಕ್ಕವಲ್ಲ. ರಾಜ್ಯಾಧಿಕಾರದ ನೀತಿ ನಿರೂಪಣೆಯೊಂದಿಗೆ ಸಂವಿಧಾನವು ಐತಿಹಾಸಿಕವಾಗಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಪ್ರಜಾಪ್ರಭುತ್ವದ ಮೂಲ ಆಶಯದಂತೆ ರಾಜ್ಯಾಧಿಕಾರದಲ್ಲಿ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯವನ್ನು ಸಂವಿಧಾನದ ಮೂಲಕ ಜಾರಿಗೆ ತರಲಾಗಿದೆ. ದೇಶದ ಎಲ್ಲಾ ಜನರ ಆಶಯವನ್ನು ಪ್ರತಿನಿಧಿಸುವ ಪವಿತ್ರ ಗ್ರಂಥವಾಗಿದೆ. ಜನಸಾಮಾನ್ಯರಿಗೆ ಸಂವಿಧಾನದತ್ತ ಅವಕಾಶಗಳನ್ನು ಮನದಟ್ಟು ಮಾಡಿಸುವ ರೀತಿಯಲ್ಲಿ ನಾಟಕ ರೂಪಿಸಲು ಶ್ರಮಿಸಲಾಗುತ್ತಿದೆ’ ಎಂದು ನಾಟಕದ ನಿರ್ದೇಶಕ ಬಾಬಾಸಾಹೇಬ ಕಾಂಬ್ಳೆ ಹೇಳಿದರು.

ರಂಗಾಯಣದ ರೆಪರ್ಟರಿ ಕಲಾವಿದರು ಕೊರೊನಾ ಜಾಗೃತಿಗಾಗಿ ಸಿದ್ಧಪಡಿಸುತ್ತಿರುವ ನಾಟಕ ಮಲ್ಲಪ್ಪ ಹೊಂಗಲ್ (ಮೊಬೈಲ್ ಮಲ್ಲ) ಅವರ ನಿರ್ದೇಶನದಲ್ಲಿ ತಯಾರಾಗುತ್ತಿದೆ.

ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ಆಡಳಿತಾಧಿಕಾರಿ ಮಂಜುನಾಥ ಡೊಳ್ಳಿನ ಇದ್ದರು.

40 ಕಲಾವಿದರು ತರಬೇತಿ ಪಡೆಯುತ್ತಿದ್ದಾರೆ. ಯೋಗಾಭ್ಯಾಸ, ಸಂಗೀತ ಮತ್ತಿತರ ಪೂರಕ ಚಟುವಟಿಕೆಗಳು ಕೂಡ ನಡೆಯುತ್ತಿವೆ. ಜುಲೈ ಅಂತ್ಯದವರೆಗೆ ಶಿಬಿರ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು