ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ | ಮಳೆ: ಧರೆಗುರುಳಿದ ಮರ

Published 17 ಏಪ್ರಿಲ್ 2024, 15:32 IST
Last Updated 17 ಏಪ್ರಿಲ್ 2024, 15:32 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ‌ ಕೆಲ‌ ಗ್ರಾಮಗಳಲ್ಲಿ ಗುಡುಗು, ಜೋರಾದ ಗಾಳಿಯೊಂದಿಗೆ ಬುಧವಾರ ಮಳೆ ಸುರಿಯಿತು.

ಬಿಸಿಲಿನ ತಾಪಕ್ಕೆ ಕಾಯ್ದಿದ್ದ ಭೂ ತಾಯಿ ಒಡಲಿಗೆ ಮಳೆರಾಯ ತಂಪೆರೆದ. ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನತೆ ಮಳೆಯ ಹನಿ ನೀರು ನೆತ್ತಿಯ ಮೇಲೆ ಬಿಳುತ್ತಿದ್ದಂತೆ ಮೈಯೊಡ್ಡಿ ಸಂಭ್ರಮಿಸಿದರು. ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನತೆ ಮಳೆ ಬರುತ್ತಿದ್ದಂತೆ ನಿಟ್ಟುಸಿರು ಬಿಟ್ಟರು.

ಜೋರಾದ ಗಾಳಿಯೊಂದಿಗೆ ನೆಲಕಪ್ಪಳಿಸಿದ ಮಳೆಯಿಂದ ಹೊಸೂರ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗುರುಳಿತು. ಮರ ಬಿದ್ದ ಸದ್ದು ಕೇಳಿ ರಸ್ತೆ ಅಕ್ಕ, ಪಕ್ಕದ ಜನ ಗಾಬರಿಗೊಂಡರು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಪಟ್ಟಣ ಪ್ರದೇಶದಲ್ಲಿ ತುಂತುರು ಮಳೆ ಹನಿ ಸುರಿದರೆ ಮತಕ್ಷೇತ್ರದ ಹೊಸೂರ, ಇಂಗಳಗಿ, ಮಾಟೊಳ್ಳಿ, ಇಂಚಲ, ಮುರಗೋಡ, ಸುತ್ತಗಟ್ಟಿ ಗ್ರಾಮದಲ್ಲಿ ಜೋರಾದ ಮಳೆ ಆಯಿತು. ಮಳೆಯ ರಭಸಕ್ಕೆ ಗ್ರಾಮಗಳ ಪ್ರತಿಯೊಂದು ಬೀದಿಗಳು ಮಳೆ ನೀರಿನಿಂದ ತುಂಬಿಕೊಂಡು ಹರಿದವು.  

ಬೈಲಹೊಂಗಲದಲ್ಲಿ ಬುಧರ ಸುರಿದ ಗಾಳಿ ಮಳೆಗೆ ಹೊಸೂರ ರಸ್ತೆಯಲ್ಲಿ ಧರೆಗುರುಳಿದ ಮರ.
ಬೈಲಹೊಂಗಲದಲ್ಲಿ ಬುಧರ ಸುರಿದ ಗಾಳಿ ಮಳೆಗೆ ಹೊಸೂರ ರಸ್ತೆಯಲ್ಲಿ ಧರೆಗುರುಳಿದ ಮರ.
ಬೈಲಹೊಂಗಲದಲ್ಲಿ ಬುಧವಾರ ಸುರಿದ ಮಳೆಗೆ ಸಂಗೊಳ್ಳಿ ರಾಯಣ್ಣ ವೃತ್ತ ವಾಹನ ಸಂಚಾರ ಇಲ್ಲದೆ ಸ್ತಬ್ಧಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT