ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿ ಗುಡ್ಡದ ಮೇಲೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಬಹುಪಾಲು ಪೂರ್ಣಗೊಂಡಿದೆ. ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಈಗ ಸಿಮೆಂಟ್ ಮೂಲಕ ನಿರ್ಮಿಸಲಾಗುತ್ತಿದೆ. ಆದರೆ, ಇದರಲ್ಲಿ ರೈತರ ಹಿತಾಸಕ್ತಿ ಬಲಿಕೊಡುವ ಯಾವುದೇ ಕ್ರಮವಿಲ್ಲ. ರೈತರ ಅನಿಸಿಕೆ ಪಡೆದು, ಮಾಹಿತಿ ನೀಡಿ, ನಿಯಮಗಳ ಪ್ರಕಾರ ಸರ್ಕಾರದ ಜಾಗದಲ್ಲೇ ರಸ್ತೆ ನಿರ್ಮಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡರ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ನೀಡಿರುವ ಅವರು, ‘ಬೇಕಾಬಿಟ್ಟಿಯಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ವಿಶ್ವವಿದ್ಯಾಲಯ ಇಂಥ ಯಾವುದೇ ಕೆಲಸಕ್ಕೆ ಕೈ ಹಾಕಿಲ್ಲ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ, ಮುಂಚೆಯೇ ಇದ್ದ ಸರ್ಕಾರ ರಸ್ತೆಯ ಮರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದು ಏಕಪಕ್ಷೀಯ ನಿರ್ಧಾರವಲ್ಲ’ ಎಂದಿದ್ದಾರೆ.

ನೂತನ ಮುಖ್ಯ ಆವರಣಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಅನುದಾನವನ್ನು ಒದಗಿಸಿದ್ದು, ಇದಕ್ಕೆ ಉನ್ನತ ಶಿಕ್ಷಣ ಸಚಿವರು ಹಾಗೂ ಗ್ರಾಮೀಣ ಶಾಸಕರೂ ವಿಶೇಷ ಪ್ರಯತ್ನ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯನ್ನು ಈ ಹಿಂದೆ ಕಂದಾಯ ಇಲಾಖೆಯ ಗ್ರಾಮ ನಕಾಶೆಯ ದಾಖಲೆಯಲ್ಲಿರುವಂತೆ ಮತ್ತು ಸ್ಥಳೀಯ ರೈತರ ಕೋರಿಕೆಯಂತೆ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ಲೋಕೋಪಯೋಗಿ ಇಲಾಖೆಯಿಂದ ನೇಮಿಸಿದ ಗುತ್ತಿಗೆದಾರರು ಸಿ.ಸಿ. ದರ್ಜೆಗೆ ಉನ್ನತೀಕರಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ. ಸರ್ಕಾರಿ ರಸ್ತೆಯನ್ನು ಅಳತೆ ಮಾಡಿ ಅಳತೆಯ ಗಡಿಗಳನ್ನು ಗುರುತಿಸಿ, ನಂತರ ರೈತರೊಂದಿಗೆ ಸಮಾಲೋಚಿಸಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ. ಕಾರಣ, ರೈತರ ಕೋರಿಕೆಯನ್ವಯ ಕಂದಾಯ ಇಲಾಖೆಯ ಗ್ರಾಮ ನಕಾಶೆಯ ದಾಖಲೆಗಳನ್ವಯ ಅಳತೆ ಮಾಡಿಸಿ, ರೈತರ ಮಾಹಿತಿಗಾಗಿ ಗಡಿಗಳನ್ನು ಗುರುತು ಮಾಡಲಾಗಿದೆ. ಅಳತೆ ಮಾಡದೇ ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳದಂತೆ ಒತ್ತಾಯಿಸಿದ್ದರಿಂದ ಈ ಮೂಲ ರಸ್ತೆಯ (ಎ.ಪಿ.ಎಂ.ಸಿ. ಕಡೆಯಿಂದ) ಅಳತೆಯಾಗುವವರೆಗೆ ಮುಖ್ಯ ಆವರಣಕ್ಕೆ ಸಂಪರ್ಕ ಕಲ್ಪಿಸುವ ಟೋಲ್ ನಂತರದ ಬೆಂಡಿಗೇರಿ ಮಾರ್ಗದ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ತೊಂದರೆಯಾಗಿದ್ದರೆ ಸರಿಪಡಿಸುತ್ತೇವೆ: ಕ್ಯಾಂಪಸ್ನಲ್ಲಿ ನೀರಿನ ಮೂಲ ಇಲ್ಲ. ಸರ್ಕಾರದ ರಸ್ತೆಯ ಇಕ್ಕೆಲಗಳಲ್ಲಿ ನೀರಿನ ಲಭ್ಯತೆಯ ಬಗ್ಗೆ ಮಾಹಿತಿ ದೊರಕಿದ್ದರಿಂದ ಬೋರ್ವೆಲ್ ಕೊರೆಯಿಸಲಾಗಿದೆ. ಇದರಿಂದಲೂ ವಿಶ್ವವಿದ್ಯಾಲಯಕ್ಕೆ ಅಗತ್ಯ ನೀರು ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ, ನೀರಿನ ಮೂಲ ಹೊಂದಿರುವ ರೈತರಿಂದ ನೀರನ್ನು ಪಡೆದುಕೊಂಡು ಪೈಪ್ಲೈನ್ ಮೂಲಕ ನೀರಿನ ಅಗತ್ಯ ಪೂರೈಸಿಕೊಳ್ಳಲು ಪೈಪ್ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ರೈತರ ಯಾವುದೇ ಪೈಪ್ಲೈನುಗಳು ಇದ್ದರೆ ಜಾಗರೂಕತೆಯಿಂದ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಆದಾಗಿಯೂ ತೊಂದರೆಯಾಗಿದ್ದರೆ ಅದನ್ನು ವಿಶ್ವವಿದ್ಯಾಲಯವು ಸರಿಪಡಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಾಹನಗಳ ಓಡಾಟದಿಂದ ರೈತರ ಬೆಳೆ ದೂಳಾಗಿದೆ ಎಂಬ ಮಾಹಿತಿ ಬಂದಿದೆ. ಈ ಮಾರ್ಗದಲ್ಲಿ 20 ಕಿ.ಮೀ ವೇಗದಲ್ಲಿ ಮಾತ್ರ ಓಡಾಡುವಂತೆ ಚಾಲಕರಿಗೆ ಸೂಚಿಸಲಾಗಿದೆ. ರಸ್ತೆಯ ಮೇಲೆ ನೀರು ಸಿಂಪಡಿಸಲು ಸೂಚಿಸಲಾಗಿದೆ. ಇದನ್ನು ನಿಯಮಿತವಾಗಿ ಪರಿಶೀಲಿಸಲು ವಿಶ್ವವಿದ್ಯಾಲಯದ ಸಿಬ್ಬಂದಿಯನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ. ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದೂ ಪ್ರತಿಕ್ರಿಯಿಸಿದ್ದಾರೆ.

ಸಂಪರ್ಕಿಸಿ: ವಿಶ್ವವಿದ್ಯಾಲಯದ ಎಸ್ಟೇಟ್ ಅಧಿಕಾರಿ (8147981201), ಎಸ್ಟೇಟ್ ಕಚೇರಿ ಅಧೀಕ್ಷಕ ಅಧಿಕಾರಿ (9945726407)ಯನ್ನು ರೈತರು ಸಂಪರ್ಕಿಸಬಹುದು ಎಂದೂ ಹೇಳಿದ್ದಾರೆ.

ಹೊಲದಲ್ಲೇ ಸಭೆ ಮಾಡಲು ರೈತರ ಪಟ್ಟು

ರೈತರ ಸಮಕ್ಷಮದಲ್ಲಿ ಸಮಾಲೋಚನೆ ನಡೆಸಲು ಲಿಖಿತ ರೂಪದಲ್ಲಿ ರೈತರ ಒಪ್ಪಿಗೆ ಪಡೆಯಲು ಜ.19ರಂದು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ನಲ್ಲಿ ಸಭೆ ಕರೆದಿದ್ದಾರೆ. ಆದರೆ ಸಭೆಯನ್ನು ವಿ.ವಿ ಕ್ಯಾಂಪಸ್ನಲ್ಲಿ ಮಾಡುವುದು ಬೇಡ. ತಮ್ಮ ಹೊಲದಲ್ಲೇ ಮಾಡಬೇಕು. ಆವಾಗ ಮಾತ್ರ ಕಾಮಗಾರಿ ನೈಜತೆ ರೈತರ ಪರಿಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುತ್ತದೆ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಕೂಡ ರೈತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿತ್ತು. ಆದರೂ ಸ್ಪಂದಿಸಿಲ್ಲ. ಆದ್ದರಿಂದ ಹೊಲದಲ್ಲೇ ಸಭೆ ಮಾಡಬೇಕು. ಇಲ್ಲದಿದ್ದರೆ ಸಭೆ ಬಹಿಷ್ಕರಿಸುತ್ತೇವೆ ಎಂದು ರೈತರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.