ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ’ ಪ್ರಕಟ

Last Updated 22 ಜುಲೈ 2019, 12:43 IST
ಅಕ್ಷರ ಗಾತ್ರ

ಬೆಳಗಾವಿ: ಹೊಂಬೆಳಕು ಸಾಂಸ್ಕೃತಿಕ ಸಂಘ ಕೊಡಮಾಡುವ ‘ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ’ ಪ್ರಕಟಗೊಂಡಿದೆ.

2017–18ರಲ್ಲಿ ಪ್ರಕಟವಾಗಿ ಸ್ವೀಕೃತವಾದ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ಆಯ್ಕೆ ಸಮಿತಿ ಸದಸ್ಯರಾದ ಶಶಿಕಲಾ ಪಾವಸೆ, ಪ್ರೊ.ಶಾಂತಾರಾಮ ಹೆಗಡೆ, ಅಡಿವೆಪ್ಪ ಇಟಗಿ ಹಾಗೂ ಉಮೇಶ ಹಾರುಗೊಪ್ಪ ಪರಿಶೀಲಿಸಿದ್ದಾರೆ. ಆಯ್ಕೆಯಾದ ಕೃತಿಗಳ ವಿವರ ಇಂತಿದೆ.

ಕವನಸಂಕಲನ ವಿಭಾಗ: ಮೌನದೊಳಗಿನ ಮಾತು-ಬಾಲಕೃಷ್ಣ ಜಂಬಗಿ, ಅಕ್ಕಡಿ ಸಾಲು– ಎ.ಎಸ್. ಮಕಾನದಾರ, ಹೃದಯದಾರೆ-ಬಂಡು ಕೋಳಿ, ಆಕಾಶಕ್ಕೊಂದು ಏಣಿ- ಶಿಲ್ಪಾ ಮ್ಯಾಗೇರಿ.

ಕಥಾಸಂಕಲನ ವಿಭಾಗ: ಜಾಳ ಪೊಳ- ವಾಮನ ಕುಲಕರ್ಣಿ.

ವ್ಯಕ್ತಿ ಚಿತ್ರಣ ವಿಭಾಗ: ಶಿವೇಶ್ವರ ದೊಡ್ಡಮನಿ -ಎಚ್.ಬಿ. ಪೂಜಾರ.

ಕಾದಂಬರಿ ವಿಭಾಗ: ಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ– ಯ.ರು. ಪಾಟೀಲ.

ವಿಮರ್ಶಾ ಲೇಖನ ವಿಭಾಗ: ಅನುರಣನ– ಡಾ.ಸುಜಾತಾ ಚ. ಚಲವಾದಿ.

ವಿಶೇಷ ಲೇಖನ ವಿಭಾಗ: ಸ್ಟಾರ್ಟ್‌ಅಪ್‌ ಯುಗದಲ್ಲಿ ಸ್ವಉದ್ಯೋಗ– ವಿಜಯಕುಮಾರ ಖ. ನೆರಲೇಕರ.

ಪ್ರವಾಸ ಕಥನ: ಕಿವಿಗಳ ನಾಡಿನಲ್ಲೋಂದು ದಾರಿ- ಪ್ರವಾಸ - ಶ್ವೇತಾ ನರಗುಂದ.

ಲೇಖನ ಸಾಹಿತ್ಯ ವಿಭಾಗ: ಸಾಕ್ಷಾತ್ಕಾರ– ಎಂ.ಬಿ. ಪಾಟೀಲ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೆಲವೇ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸ.ರಾ. ಸುಳಕೊಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT