ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್‌ ಮಾರಾಟ: ಇಬ್ಬರ ಬಂಧನ

Last Updated 26 ಏಪ್ರಿಲ್ 2021, 21:22 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ‘ರೆಮ್‌ ಡಿಸಿವಿರ್’ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ನಗರ ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಇಲ್ಲಿನ ಶಾಹೂನಗರದ ಸಮರ್ಥ ಗಲ್ಲಿ ನಿವಾಸಿ, ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿಯ ರಾಮಾಪೂರದ ಮಂಜುನಾಥ ದಾನವಾಡಕರ (35) ಹಾಗೂ ಶಿವಾಜಿನಗರದ ನಿವಾಸಿಯಾಗಿರುವ ಬೈಲಹೊಂಗಲ ತಾಲ್ಲೂಕು ನಯಾನಗರದವರಾದ ಸಂಜೀವ ಚಂದ್ರಶೇಖರ ಮಾಳಗಿ (33) ಬಂಧಿತರು.

ಇಬ್ಬರೂ ಖಾಸಗಿ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್‌ ಆಗಿದ್ದಾರೆ. ₹ 3,400 ಬೆಲೆಯ ಔಷಧಿಯನ್ನು ₹ 25 ಸಾವಿರದಿಂದ ₹ 30ಸಾವಿರಕ್ಕೆ ಕಾಳಸಂತೆಯಲ್ಲಿ ಮಾರಲು ಸಂಚು ರೂಪಿಸಿದ್ದರು. ಅವರಿಂದ ₹ 11,600 ಮೌಲ್ಯದ 3 ಔಷಧಿ ಬಾಟಲಿಗಳು, ದ್ವಿಚಕ್ರವಾಹನ ಮತ್ತು 2 ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT