ಬುಧವಾರ, ಆಗಸ್ಟ್ 21, 2019
22 °C

ಬಸ್‌ ಸೌಕರ್ಯ ಕಲ್ಪಿಸಲು ಆಗ್ರಹ

Published:
Updated:
Prajavani

ಬೆಳಗಾವಿ: ಅಥಣಿಯಿಂದ ಮಂಗಸೂಳಿ ಮಾರ್ಗವಾಗಿ ಶೇಡಬಾಳ ರೈಲ್ವೆ ನಿಲ್ದಾಣಕ್ಕೆ ಪ್ರತ್ಯೇಕ ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಪಕ್ಷದ ಕಿಸಾನ್‌ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸುರೇಂದ್ರ ತವಲಕರ ಮಾತನಾಡಿ, ‘ಮಹಾರಾಷ್ಟ್ರದ ಗಡಿಭಾಗದಲ್ಲಿರುವ ತಾಲ್ಲೂಕಿನ ಸುಕ್ಷೇತ್ರ ಮಂಗಸೂಳಿಯ ಮಲ್ಲಯ್ಯ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ಆದರೆ, ದೇವಸ್ಥಾನಕ್ಕೆ ಸಮರ್ಪಕ ಬಸ್‌ ಸೌಕರ್ಯ ಇಲ್ಲದಿರುವುದರಿಂದ ಭಕ್ತರಿಗೆ ಅನಾನುಕೂಲ ಉಂಟಾಗುತ್ತಿದೆ. ಹೀಗಾಗಿ, ಅಥಣಿಯಿಂದ ಮಂಗಸೂಳಿ ಮಾರ್ಗವಾಗಿ ಶೇಡಬಾಳ ರೈಲ್ವೆ ನಿಲ್ದಾಣಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. 

‘ವಿಯಪುರದಿಂದ ಕೊಲ್ಲಾಪುರಕ್ಕೆ ಹೋಗುವ ಬಸ್‌ಗಳನ್ನು ಮಂಗಸೂಳಿ ಮಾರ್ಗವಾಗಿ ಓಡಿಸಬೇಕು. ದೇವಸ್ಥಾನಕ್ಕೆ ನಿಲುಗಡೆಯ ವ್ಯವಸ್ಥೆಯನ್ನು ಮಾಡಬೇಕು. ಇದರಿಂದ ಮಹಾರಾಷ್ಟ್ರ ಹಾಗೂ ರಾಜ್ಯದ ಭಕ್ತರಿಗೆ ಅನುಕೂಲವಾಗುತ್ತದೆ’ ಎಂದು ಆಗ್ರಹಿಸಿದರು. 

ಕಾರ್ಯಕರ್ತರಾದ ಕೆ.ಜಿ. ಪಾಟೀಲ, ದುರ್ಗೇಶ ಮೆತ್ರಿ, ಸದಾನಂದ ಪಾಟೀಲ, ಇಸ್ಮಾಯಿಲ್ ಮುಲ್ಲಾ ಇದ್ದರು.

Post Comments (+)