ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ದೊಡವಾಡ ಮಾರ್ಗವಾಗಿ ಬೆಂಗಳೂರು ಬಸ್ ಸೇವೆ ಪುನಾರಂಭ

Published 19 ಸೆಪ್ಟೆಂಬರ್ 2023, 14:25 IST
Last Updated 19 ಸೆಪ್ಟೆಂಬರ್ 2023, 14:25 IST
ಅಕ್ಷರ ಗಾತ್ರ

ಬೈಲಹೊಂಗಲ: ತಾಲ್ಲೂಕಿನ ದೊಡವಾಡ ಗ್ರಾಮದಿಂದ ಬೆಂಗಳೂರ ಬಸ್ ಸೇವೆ ಪುನಾರಂಭಗೊಂಡಿದ್ದು, ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿ ಸಂಭ್ರಮಾಚರಿಸಿದರು.

ಕಳೆದ ಹತ್ತು ವರ್ಷಗಳಿಂದ ಬಂದ್ ಆಗಿದ್ದ ಬೈಲಹೊಂಗಲದಿಂದ ವಾಯಾ ದೊಡವಾಡ ಮಾರ್ಗ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಸೇವೆಯನ್ನು ಪುನರಾರಂಭಿಸಲಾಗಿದೆ. ಸೋಮವಾರದಿಂದ ಈ ಸೇವೆಗೆ ಪುನಹ ಚಾಲನೆ ನೀಡಿದ್ದು ಬೈಲಹೊಂಗಲ ಘಟಕದಿಂದ ಆಗಮಿಸಿದ ನೂತನ ಬಸ್ಸಿಗೆ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರು ಪ್ರಯಾಣಕ್ಕೆ ಶುಭ ಕೋರಿದರು.

ಮುಖಂಡ ಬಾಳಪ್ಪ ಅಲಸಂಧಿ ಮಾತನಾಡಿ, 'ಶಾಸಕ ಮಹಾಂತೇಶ ಕೌಜಲಗಿ ಅವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದಿಂದ ವಾಯಾ ದೊಡವಾಡ ಮಾರ್ಗವಾಗಿ ಬೆಂಗಳೂರು ಬಸ್ ಸೇವೆ ಪುನಾರಂಭಿಸಲಾಗಿದೆ. ಗ್ರಾಮದಿಂದ ನೇರವಾಗಿ ಬೆಂಗಳೂರು ಹಾಗೂ ಪ್ರಮುಖ ನಗರಗಳಿಗೆ ತರೆಳಲು ಅನುಕೂಲವಾಗಲಿದೆ. ಗ್ರಾಮಸ್ಥರ ಪರವಾಗಿ ಶಾಸಕರಿಗೆ ಧನ್ಯವಾದ ಹೇಳಿದರು.

ರುದ್ರಮುನಿ ಸ್ವಾಮಿ ನೂತನ ಬಸ್ಸಿಗೆ ಪೂಜೆ ನೆರವೇರಿಸಿದರು. ಸಂಕಪ್ಪ ಕೊರಕೊಪ್ಪ, ವಿಠ್ಠಲ ಕಾಳಿ, ಶಿವಶಂಕರ ಅರಳಿಮರದ, ಅಶೋಕ ಯಲಿಗಾರ, ಬಾಬು ಮುರಗೋಡ, ಸಂಗಮೇಶ ಕುರುಬಗಟ್ಟಿ, ವೀರಭದ್ರಪ್ಪ ಮಾದರ, ವಿಠ್ಠಲ ಕಲ್ಲೂರ, ಶಂಕರ ಬೆಳವಡಿ, ಮಹಾಂತೇಶ ದಾಭಿಮಠ, ಅಬ್ದುಲ ಮುಜಾವರ, ಪರುತಪ್ಪ ಸಂಗೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT