ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದುವರಿದ ಮಹಾ ಮಳೆ - ಕೃಷ್ಣಾ ನದಿಯಲ್ಲಿ 2 ಅಡಿ ನೀರು ಹೆಚ್ಚಳ

Published 2 ಜುಲೈ 2024, 15:46 IST
Last Updated 2 ಜುಲೈ 2024, 15:46 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಹೆಚ್ಚು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪ ವಿಭಾಗದ ಕೃಷ್ಣಾ, ಧೂಧಗಂಗಾ, ವೇದಗಂಗಾ ನದಿಗಳಲ್ಲಿ ನೀರಿನ ಹರಿವು ಮಂಗಳವಾರ ಮತ್ತೇ 2 ಅಡಿಯಷ್ಟು ಹೆಚ್ಚಳವಾಗಿದೆ. 

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರಾಜಾಪೂರೆ ಬ್ಯಾರೇಜ್ ನಲ್ಲಿ 16125 ಕ್ಯುಸೆಕ್ ಹೊರ ಹರಿವು ಇದ್ದು, ದೂಧಗಂಗಾ ನದಿಯಿಂದ 4920 ಕ್ಯುಸೆಕ್ ಸೇರಿದಂತೆ ಕೃಷ್ಣಾ ಹಾಗೂ ದೂಧಗಂಗಾ ನದಿಗಳ ಸಂಗಮ ಸ್ಥಳ ಕಲ್ಲೋಳ ಬ್ಯಾರೇಜ್ ಬಳಿಯಲ್ಲಿ 21045 ಕ್ಯುಸೆಕ್ ನೀರು ಹರಿಯುತ್ತಿದೆ.

ಮಹಾ ಮಳೆಯಿಂದಾಗಿ ಮಹಾರಾಷ್ಟ್ರದ 105 ಟಿಎಂಸಿ ಅಡಿ ಸಾಮರ್ಥ್ಯದ ಕೊಯ್ನಾ ಡ್ಯಾಂ ನಲ್ಲಿ 100.13 ಟಿಎಂಸಿ ಅಡಿ ನೀರು, 13.50 ಟಿಎಂಸಿ ಅಡಿ ಸಾಮರ್ಥ್ಯದ ಧೂಮ ಜಲಾಶಯದಲ್ಲಿ 11.69 ಟಿಎಂಸಿ ಅಡಿ, 10.10 ಟಿಎಂಸಿ ಅಡಿ ಸಾಮರ್ಥ್ಯದ ಕಣೇರ ಆಣೆಕಟ್ಟೆಯಲ್ಲಿ 9.60 ಟಿಎಂಸಿ ಅಡಿ, 34.40 ಟಿಎಂಸಿ ಅಡಿ ಸಾಮರ್ಥ್ದದ ವಾರಣಾ ಜಲಾಶಯದಲ್ಲಿ 27.51 ಟಿಎಂಸಿ ಅಡಿ, 25.40 ಟಿಎಂಸಿ ಅಡಿ ಸಾಮರ್ಥ್ಯದ ಕಾಳಮ್ಮವಾಡಿ ಆಣೆಕಟ್ಟೆಯಲ್ಲಿ 23.99 ಟಿಎಂಸಿ ಅಡಿ, 8.36 ಟಿಎಂಸಿ ಅಡಿ ಸಾಮರ್ಥ್ಯದ ರಾಧಾನಗರಿ ಜಲಾಶಯದಲ್ಲಿ 7.77 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕೃಷ್ಣಾ ನದಿಗೆ ಅಡ್ಡಲಾಗಿರುವ 6 ಟಿಎಂಸಿ ಅಡಿ ಸಾಮಥ್ರ್ಯದ ಹಿಪ್ಪರಗಿ ಬ್ಯಾರೇಜ್ ನಲ್ಲಿ 3.90 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, 17760 ಕ್ಯುಸೆಕ್ ಒಳ ಹರಿವು ಇದೆ. 750 ಕ್ಯುಸೆಕ್ ನೀರನ್ನು ಹಿಪ್ಪರಗಿ ಬ್ಯಾರೇಜ್ ನಿಂದ ಹೊರ ಬಿಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT