ಬೆಳಗಾವಿ: ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ‘ರೈತ ಕೃಷಿ-ಕಾರ್ಮಿಕ ಸಂಘಟನೆ’ (ಆರ್‌ಕೆಎಸ್) ನೇತೃತ್ವದಲ್ಲಿ ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕುಗಳ ಮುಗಳಿಹಾಳ, ಅಕ್ಕಿಸಾಗರ, ದಾಸನಾಳ, ಬಾಗೋಜಿಕೊಪ್ಪ, ಹಿರೇಕೊಪ್ಪ, ಚಿಕ್ಕೊಪ್ಪ ಮೊದಲಾದ ಹಳ್ಳಿಗಳಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.

ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ರೈತರಿಗೆ ಆಗುವ ತೊಂದರೆಗಳ ಬಗ್ಗೆ ತಿಳಿಸಲಾಯಿತು.

ಸಂಘಟನೆ ಜಿಲ್ಲಾ ಸಂಚಾಲಕ ಲಕ್ಕಪ್ಪ ಬಿಜ್ಜನ್ನವರ, ಸಂಘಟನಾಕಾರ ರಾಜು ಗಾಣಗಿ, ವಿಠ್ಠಲ ದೊಡ್ಡಗೌಡರ, ಪ್ರವೀಣ ಸಿಂಗಾಡೆ, ರೈತ ಮುಖಂಡರು ಮತ್ತು ಹಿರಿಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.