ಬೆಳಗಾವಿ: ‘ಬಿಜೆಪಿಯವರು ನಾಳೆ ಬೆಳಿಗ್ಗೆ 8ಕ್ಕೆ ಯುದ್ಧ ಆರಂಭ ಮಾಡಲಿ. ನಾವೇನೂ ಬೇಡ ಅಂದಿಲ್ಲವಲ್ಲ. ಯುದ್ಧ ಬೇಡ ಎನ್ನಲು ಸಿದ್ದರಾಮಯ್ಯ ಅವರೇನೂ ಲೆಫ್ಟಿನಂಟ್ ಕಮಾಂಡರ್ ಅಲ್ಲ. ಅವರ ಆಲೋಚನೆ ತಿರುಚಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಸಿದ್ದರಾಮಯ್ಯ ಆರ್ಥಿಕ ತಜ್ಞರು. ಯುದ್ಧದಿಂದ ಏನೇನೂ ನಷ್ಟ, ಆರ್ಥಿಕ ಸಮಸ್ಯೆ ಎಷ್ಟಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅವರು ಯುದ್ಧ ಬೇಡ ಎಂದಿದ್ದಾರೆ. ಯುದ್ಧ ಬೇಕು ಎನ್ನುವವರು ಯಾರೂ ಯುದ್ಧ ಮಾಡಲು ಗಡಿಗೆ ಹೋಗುವುದಿಲ್ಲ. ಇಲ್ಲೇ ಕೂತು ಹೇಳುತ್ತಾರೆ ಅಷ್ಟೇ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಯುದ್ಧದ ವಿಚಾರ ನಮ್ಮ ಕೈಯಲ್ಲಿ ಇಲ್ಲವೇ ಇಲ್ಲ. ನಮ್ಮ ಮಾತನ್ನು ಅವರೇನೂ ಕೇಳಬೇಕಿಲ್ಲ. ಯುದ್ಧದ ನಿರ್ಧಾರ ಮಾಡಲು ಬಿಜೆಪಿ ಸರ್ಕಾರಕ್ಕೆ ಸ್ವತಂತ್ರವಿದೆ. ಇದರಲ್ಲಿ ರಾಜಕೀಯ ಮಾಡಬೇಕಿಲ್ಲ. ತಮ್ಮ ಭದ್ರತಾ ಲೋಪ ಮುಚ್ಚಿಟ್ಟುಕೊಳ್ಳಲು ಆರೋಪಿಸುತ್ತಾರೆ. ವೈಫಲ್ಯ ಹೇಳುವುದನ್ನು ಬಿಟ್ಟು, ಹಿಂದೂ ಎಂದು ಕೇಳಿದ್ದಾರೆ ಎಂಬ ವಿಷಯವನ್ನೇ ಮುಂದೆ ಮಾಡಿದ್ದಾರೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.