ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ನೀಡಿ ಮಹಿಳಾ ದಿನಾಚರಣೆ

ನಿಯತಿ ಪ್ರತಿಷ್ಠಾನದಿಂದ ಕಾರ್ಯಕ್ರಮ
Last Updated 9 ಮಾರ್ಚ್ 2020, 9:22 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ನಿಯತಿ ಪ್ರತಿಷ್ಠಾನದಿಂದ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ತ್ರೀಯರಿಗೆ ‘ಸಾವಿತ್ರಿಬಾಯಿ’ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಭಾನುವಾರ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇಫಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಉರಗ ಸಂರಕ್ಷಕಿ ನಿರ್ಜರಾ ಚಿಟ್ಟಿ, ಗಾಯಕಿ ಮಂಗಲಾ ಮಠದ, ಕಲ್ಪವೃಕ್ಷ ಪ್ರತಿಷ್ಠಾನದ ಸವಿತಾ ಕಾಂಬಳೆ, 500 ಮಹಿಳೆಯರನ್ನು ಒಟ್ಟಿಗೆ ಸೇರಿಸಿ ವಂದೇಮಾತರಂ ಹಾಡಿಸಿದ ವರದಾ ಕುಲಕರ್ಣಿ, ಮಹಿಳಾ ಸಬಲೀಕರಣಕ್ಕೆ ದುಡಿಯುತ್ತಿರುವ ಅವೇಕ್ ಸಂಸ್ಥೆಯ ವಂದನಾ ಪುರಾಣಿಕ್, ಚಿನ್ಮಯ ಮಿಷನ್‌ನ ಪ್ರಜ್ಞಾ ದೀದಿ, ಜಲ ಸಂರಕ್ಷಕಿ ಆರತಿ ಭಾಂಡ್ರೆ, ನಾರಿಶಕ್ತಿ ಸಂಘಟನೆಯ ಮುಖ್ಯಸ್ಥೆ ಸಫೀನಾ ಜೋಸೆಫ್‌, ಬೇಲಾ ಸಮೂಹದ ಶೀತಲ್‌ ಚಿಲಮಿ, ಅಂತರರಾಷ್ಟ್ರೀಯ ಬಾಕ್ಸಿಂಗ್ ವಿನ್ನರ್‌ ಶಾಮಲ್‌ ಬೆಳಗಾವಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿಯತಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಾತನಾಡಿ, ‘ಮಹಿಳೆ ಯಾವುದೇ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಮನೆಯಲ್ಲಿನ ಜವಾಬ್ದಾರಿಯನ್ನೂ ನಿರ್ವಹಿಸುವ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿರುವ ಸಾಧಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ. ಪ್ರವಾಹ, ಅತಿವೃಷ್ಟಿ ಸಂದರ್ಭದಲ್ಲಿ ಸಂತ್ರಸ್ತರಿಗೆ ಅವಶ್ಯ ಸಾಮಗ್ರಿಗಳನ್ನು ನೀಡಿದ್ದೆವು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಡಾ.ನವೀನಾ ಶೆಟ್ಟಿಗಾರ, ದಯಾ ಶಾಹಪುರಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT