ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇತಡಸಿ: ಅಭಿವೃದ್ಧಿಗೆ ಮುಂದಾದ ಗ್ರಾ.ಪಂ

Published 29 ನವೆಂಬರ್ 2023, 13:05 IST
Last Updated 29 ನವೆಂಬರ್ 2023, 13:05 IST
ಅಕ್ಷರ ಗಾತ್ರ

ರಾಮದುರ್ಗ: ಹಿರೇತಡಸಿ ಗ್ರಾಮದ ಕೊಳಗೇರಿ ಪ್ರದೇಶದಲ್ಲಿ ರಸ್ತೆಗೆ ಮಣ್ಣು ಹಾಕುವ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಮುಂದಾಗಿದೆ.

‘ಹಿರೇತಡಸಿ ಗ್ರಾಮದಲ್ಲಿ ಸೌಲಭ್ಯಗಳು ಮರೀಚಿಕೆ’ ಶೀರ್ಷಿಕೆಯಲ್ಲಿ ಬುಧವಾರ ‘ಪ್ರಜಾವಾಣಿ’ ಪತ್ರಿಕೆಯ ಗ್ರಾಮಾಯಣ ಅಂಕಣದಲ್ಲಿ ಸುದ್ದಿ ಪ್ರಕಟಗೊಂಡ ಕಾಡಣ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಶಿಷ್ಟ ಸಮುದಾಯದ ಕಾಲೊನಿಗೆ ಹೋಗುವ ರಸ್ತೆಯನ್ನು ಆವರಿಸಿಕೊಂಡಿದ್ದ ಬಳ್ಳಾರಿ ಜಾಲಿಯನ್ನು ಜೆಸಿಬಿ ಬಳಸಿ ತೆರವುಗೊಳಿಸಿದೆ. ಕೆಸರುಮಯ ರಸ್ತೆಗೆ ಮಣ್ಣು ಸುರಿದು ರಸ್ತೆ ಮೇಲೆ ನೀರು ನಿಲ್ಲದಂತೆ ಮಾಡಿಸಿದೆ.

‘ಗ್ರಾಮದಲ್ಲಿಯ ಬಯಲು ಬಹಿರ್ದೆಸೆ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಶೌಚಾಲಯ ಬಳಸಲು ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗುವುದು. ಗ್ರಾಮದ ಎಲ್ಲರಿಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮಾನ ರೀತಿಯಲ್ಲಿ ಹಂಚಿಕೆ ಮಾಡಲಾಗುವುದು’ ಎಂದು ಪಿಡಿಒ ಬಲರಾಮ ಲಮಾಣಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT