ಮಂಗಳವಾರ, ಅಕ್ಟೋಬರ್ 26, 2021
23 °C

ಯುವಕನ ಕೊಲೆ; ಪ್ರೀತಿ–ಪ್ರೇಮದ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ಪಟ್ಟಣದ ಹೊರವಲಯದ ರೈಲ್ವೆ ಹಳಿಯ ಮೇಲೆ ಶವವಾಗಿ ದೊರೆತಿದ್ದ ಅರಬಾಜ್‌ ಮುಲ್ಲಾ (24) ಅವರ ಹತ್ಯೆಗೆ ಪ್ರೀತಿ–ಪ್ರೇಮದ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಯುವತಿಯು ಅನ್ಯಧರ್ಮಕ್ಕೆ ಸೇರಿದವಳಾಗಿದ್ದರಿಂದ, ಇವರ ಪ್ರೀತಿಗೆ ಎರಡೂ ಕುಟುಂಬದವರ ವಿರೋಧವಿತ್ತು ಎನ್ನಲಾಗಿದೆ. 

ಅರಬಾಜ್‌ ಮೂಲತಃ ಖಾನಾಪುರದವರಾಗಿದ್ದರು. ಇತ್ತೀಚೆಗೆ ಬೆಳಗಾವಿಗೆ ವಾಸ್ತವ್ಯ ಬದಲಾಯಿಸಿದ್ದರು. ಸೆ.27ರಂದು ಸ್ನೇಹಿತರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಮರುದಿನ ರೈಲ್ವೆ ಹಳಿಗಳ ಮೇಲೆ ಅವರ ಶವ ದೊರೆತಿತ್ತು. ಮೃತದೇಹವನ್ನು ಹಗ್ಗದಿಂದ ಕಟ್ಟಲಾಗಿತ್ತು. ತಲೆಯ ಮೇಲೆ ಗಾಯಗಳಿದ್ದವು. ಇವುಗಳನ್ನು ಗಮನಿಸಿದ ರೈಲ್ವೆ ಪೊಲೀಸರು, ಯುವಕನನ್ನು ಬೇರೆಡೆ ಕೊಲೆಗೈದು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರೈಲ್ವೆ ಹಳಿಗಳ ಮೇಲೆ ಎಸೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ತನಿಖೆ ಕೈಗೊಂಡಿರುವ ರೈಲ್ವೆ ಪೊಲೀಸರು ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು