ಬಂಧಿತನನ್ನು ನ್ಯಾಯಾಲಯದ ಸೂಚನೆಯಂತೆ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ನಾಗರಗಾಳಿ ಎ.ಸಿ.ಎಫ್ ಶಿವಾನಂದ ಮಗದುಮ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ನಾಗರಗಾಳಿ ಆರ್.ಎಫ್.ಒ ಪ್ರಶಾಂತ ಮಂಗಸೂಳಿ, ಮೇರಡಾ ಡಿ.ಆರ್.ಎಫ್.ಒ ಎನ್.ಜಿ ಹಿರೇಮಠ, ಸಿಬ್ಬಂದಿ ವಿಜಯ ಕೌಜಲಗಿ, ಮಂಜು ಗೌಡರ ಪ್ರದೀಪ ತುರಮರಿ, ಶ್ರವಣ ಕುಮಾರ ಭಾಗವಹಿಸಿದ್ದರು. ನಾಗರಗಾಳಿ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.