ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳತನವಾಗಿದ್ದ ಮಾಲು ವಶ

Last Updated 20 ಸೆಪ್ಟೆಂಬರ್ 2020, 3:25 IST
ಅಕ್ಷರ ಗಾತ್ರ

ಹೊಸಕೋಟೆ: ಹೊಸಕೋಟೆ ಉಪ ವಿಭಾಗದ ಪೊಲೀಸರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಸರಗಳ್ಳತನ, ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿ ಆರೋಪಿ ರಾಮಮೂರ್ತಿ ನಗರದ ನಿವಾಸಿ ಸುರೇಶ್ (27) ಆತನಿಂದ ಸುಮಾರು 8 ಪ್ರಕರಣದಲ್ಲಿ ಒಟ್ಟು ₹15,25,000 ರೂಗಳ ಮೊತ್ತದ 305 ಗ್ರಾಂ ಚಿನ್ನ ಹಾಗೂ 162 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಐಜಿ ಸೀಮಂತ್ ಕುಮಾರ್‍ ಸಿಂಗ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದು ಈ ಪ್ರಕರಣ ಭೇದಿಸಿದ ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

ಪ್ರಕರಣಗಳ ವಿವರ :1)ಆವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಸರಗಳ್ಳತನ ಹಾಗೂ ಮೂರು ಮನೆ ಕಳ್ಳತನ ಪ್ರಕರಣ ,2)ಬೆಂಗಳೂರು ನಗರ ಮಹದೇವಪುರ ಪೊಲೀಸ್ ಠಾಣಾ ಸರಹದ್ದು ಒಂದು ಸರಗಳ್ಳತನ, 3)ಕೆ.ಆರ್‍.ಪುರಂ ಪೊಲೀಸ್ ಠಾಣಾ ಸರಹದ್ದು ಒಂದು ಮನೆ ಕಳ್ಳತನ, 4)ಹೊಸಕೋಟೆ ಪೊಲೀಸ್ ಠಾಣಾ ಸರಹದ್ದಿನ ಒಂದು ಮನೆ ಕಳ್ಳತನ, 5)ಅನುಗೊಂಡನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಸರ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 8 ಪ್ರಕರಣಗಳಲ್ಲಿ ಒಟ್ಟು 305 ಗ್ರಾಂ ಚಿನ್ನದ ಒಡವೆಗಳನ್ನು ಮತ್ತು 162ಗ್ರಾಂ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT