ನಿಪ್ಪಾಣಿ: ಇಸ್ರೋ ವಿಜ್ಞಾನಿ ಮತ್ತು ತಾಲ್ಲೂಕಿನ ಆಡಿ ಗ್ರಾಮದ ನಿವಾಸಿ ಚಿದಾನಂದ ಮಗದುಮ ಅವರನ್ನು ತಾಲ್ಲೂಕಿನ ಆಡಿಯಲ್ಲಿ ಗಿರಿಮಠದ ಶಿವಾನಂದ ಸ್ವಾಮೀಜಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಚಂದ್ರಯಾನ-3 ಮಿಷನ್ ಬಗ್ಗೆ ವಿವರವಾದ ಮಾಹಿತಿ ನೀಡಿದ ಮಗದುಮ ಅವರು, ಈ ಮಿಷನ್‍ನ ಭಾಗವಾದ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೇ ಎಂದರು.
ಹಿರಿಯ ಮುಖಂಡ ಮಲಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಪಾಟೀಲ, ಸುಭಾಷ ಮಗದುಮ, ತಾತ್ಯಾಸಾಹೇಬ ಪಾಟೀಲ, ಮಲಗೌಡ ಕಮತೆ, ಶಿವಗೌಡ ಪಾಟೀಲ ಸೇರಿದಂತೆ ಮಗದುಮ ಕುಟುಂಬದವರು ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.