ಶನಿವಾರ, ಅಕ್ಟೋಬರ್ 1, 2022
25 °C

ಕುಸಿದು ಬಿದ್ದ ಎರಡಂತಸ್ತಿನ ಮನೆ: ಪ್ರಾಣಾಪಾಯದಿಂದ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಿರಂತರ ಮಳೆಯ ನಗರ ಹೊರವಲಯದ ಅನಗೋಳದಲ್ಲಿ ಸೋಮವಾರ ಎರಡು ಅಂತಸ್ತಿನ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನೊಂದೆಡೆ ನಗರದ ಭಾರತ್ ನಗರ ಹಾಗೂ ಓಂ ನಗರದಲ್ಲಿಯೂ ಒಂದೊಂದು ಮನೆ ಕುಸಿದಿವೆ. ಇದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳು ಜಖಂಗೊಂಡಿವೆ.

ಭಾನುವಾರ ತಡರಾತ್ರಿಯಿಂದಲೂ ರಭಸದ ಮಳೆ ಸುರಿಯುತ್ತಿದೆ. ಇದರಿಂದ ಅನಗೋಳದ ವಾಡಾ ಕಾಂಪೌಂಡಿನ ಅಶೋಕ ಬೆಂಡಿಗೇರಿ ಅವರ ಎರಡು ಅಂತಸ್ತಿನ ಮನೆ ಕುಸಿದು ಬಿದ್ದಿದೆ. 

ಮಳೆಯಿಂದ ಮನೆಯಲ್ಲಿ ಬಿರುಕು ಬಿಟ್ಟಿದ್ದನ್ನು ಕಂಡ ಮನೆಯ ಸದಸ್ಯರು ಹೊರಗಡೆ ಬಂದಿದ್ದರು. ಹೀಗಾಗಿ ಪ್ರಾಣ ಹಾನಿ ಸಂಭವಿಲ್ಲ.

ಇನ್ನೊಂದೆಡೆ ನಗರದ ಹಲವರ ಕಡೆ ಮನೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲೇಜುಗಳಗೆ, ಕಚೇರಿ ಕೆಲಸ, ವ್ಯಾಪಾರಕ್ಕೆ ಹೋಗುವವರು ಮನೆಯೊಳಗೆ ಉಳಿಯುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು