ಭಾನುವಾರ, ಸೆಪ್ಟೆಂಬರ್ 20, 2020
25 °C

ಅಕ್ವೆಟಿಕ್ ತಂಡಕ್ಕೆ ಶುಭ ಹಾರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಟಲಿಯ ನಪೋಲಿಯಲ್ಲಿ ಜುಲೈ 3ರಿಂದ 14ರವರೆಗೆ ನಡೆಯಲಿರುವ ‘30ನೇ ಸಮ್ಮರ್ ಯೂನಿವರ್ಸಿಯಾಡ್–2019’ ಕೂಟದಲ್ಲಿ ಭಾಗವಹಿಸಿ, ಭಾರತ ತಂಡವನ್ನು ಪ್ರತಿನಿಧಿಸಲಿರುವ ವಿಟಿಯು ಕ್ರೀಡಾಪಟುಗಳಿಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ಶುಭ ಹಾರೈಸಿ ಬೀಳ್ಕೊಟ್ಟರು.

ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಅವಿನಾಶ್ ಮಣಿ, ಶಾಹಿಲ್ ಚೀಪ್ರಾ, ಕುಶಾಗ್ರ ರಾವತ್, ಮೀನಾಕ್ಷಿ, ಶಿವಾಣಿ ಕಟಾರಿಯಾ, ದಾಮಿನಿಗೌಡ, ಚಾಹತ್ ಆರೋರ, ಸಿದ್ಧಾಂತ್ ಸೇಜ್ವಲ್, ದನುಶ್ ಸುರೇಶ್ ತಂಡದಲ್ಲಿದ್ದಾರೆ.

ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೈ.ಎಚ್. ರಾಜೇಶ್, ತಂಡದ ವ್ಯವಸ್ಥಾಪಕ ಡಾ.ಎಂ. ಶಿವರಾಮರೆಡ್ಡಿ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.