ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಭದ್ರೇಶ್ವರ ಜಾತ್ರೆಯಲ್ಲಿ ‘ಬೆಳವಲ’ ವ್ಯಾಪಾರ

Last Updated 18 ಡಿಸೆಂಬರ್ 2013, 4:58 IST
ಅಕ್ಷರ ಗಾತ್ರ

ರಾಮದುರ್ಗ: ಜಾಗೃತ ಕ್ಷೇತ್ರ ಮತ್ತು ಯಾತ್ರಾ ಸ್ಥಳ ಎಂದೇ ಖ್ಯಾತಿ ಹೊಂದಿರುವ ರಾಮದುರ್ಗ ತಾಲ್ಲೂಕಿನ ಗೊಡಚಿ ಶ್ರೀ ವೀರಭದ್ರೇಶ್ವರ ರಥೋ ತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.  

ಮಂಗಳವಾರ ಸಂಜೆ ಪುರವಂತರ ಸಮ್ಮುಖ ದಲ್ಲಿ ಗೊಡಚಿ ವೀರಭದ್ರನ ಉತ್ಸವ ಮೂರ್ತಿ ಯನ್ನು ವಿವಿಧ ವಾದ್ಯ–ಮೇಳಗಳೊಂದಿಗೆ ತಂದು ರಥದಲ್ಲಿ ಸ್ಥಾಪಿಸಿದಾಗ ‘ಹರ ಹರ ಮಹಾದೇವ’ ಎನ್ನುವ ಭಕ್ತರ ಘೋಷಣೆ ಮುಗಿಲು ಮುಟ್ಟಿತು.

ಸುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಭಕ್ತರು  ಹರಕೆ, ಕಾಣಿಕೆ ಸಲ್ಲಿಸಿ ಶ್ರೀ ವೀರಭದ್ರ ದೇವರ ಕೃಪೆಗೆ ಪಾತ್ರರಾದರು.  ತೇರ ಬಜಾರ್‌ದಲ್ಲಿನ ಎಲ್ಲ ವ್ಯಾಪಾರ ಮಳಿಗೆಗಳನ್ನು ರಥೋತ್ಸವಕ್ಕೆ ಮುಂಚೆ ತೆರವುಗೊಳಿಸಲಾಗಿತ್ತು. ಸುಮಾರು 50 ಮೀಟರ್‌ ದೂರದವರೆಗೆ ಕ್ರಮಿಸಿದ ರಥ  ಪುನಃ ಮೂಲ ಸ್ಥಾನಕ್ಕೆ ಮರಳಿದಾಗ ಭಕ್ತರು ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತ ಪಡಿಸಿ ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ದ್ದರಿಂದ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ ದ್ದರೆ, ತಮ್ಮ ವಸ್ತುಗಳನ್ನು ಕಳೆದುಕೊಂಡವರು ಮಾತ್ರ ಪರದಾಡುತ್ತಿದ್ದರು.

ಜಾತ್ರೆಗೆ ಬಂದಿದ್ದ   ಮಹಿಳೆಯರು, ಮಕ್ಕಳು, ಯುವಕರು ತೊಟ್ಟಿಲು ಜೊಕಾಲಿ, ಉಗಿಬಂಡಿ ಯಾತ್ರೆಯ ಮಜವನ್ನು ಸವಿದರು.
ಆದರೆ ಜಾತ್ರಾ ಮೈದಾನಕ್ಕೆ ಬರುವ ಮಾತ್ರ ಸಂಪೂರ್ಣ ದೂಳಿನಿಂದ ಕೂಡಿದ್ದರಿಂದ ಎಲ್ಲರು ಸ್ಥಳೀಯ ಮುಖಂಡರಿಗೆ ಹಾಗೂ ಜನಪ್ರತಿನಿಧಿ ಗಳನ್ನು ಶಪಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.

ಪ್ರಸಿದ್ಧ ಗೊಡಚಿ ಕ್ಷೇತ್ರಕ್ಕೆ ಬರುವ ಯಾತ್ರಿ ಗಳಿಗೆ ರಸ್ತೆಯಲ್ಲಿನ ತಗ್ಗು ದಿನ್ನೆಗಳು ಮಣ್ಣಿನಿಂದ ಮುಚ್ಚಿದ್ದವಾದರೂ ದೂಳು ಯಾತ್ರಿಗಳನ್ನು ಆವರಿಸಿರುವುದು ಈ ಕ್ಷೇತ್ರದ ಪ್ರತಿನಿಧಿಗಳನ್ನು ನೆನೆಸುವಂತೆ ಮಾಡಿತು.

ಭರ್ಜರಿ ಬೆಳವಲ ವ್ಯಾಪಾರ: ಗೊಡಚಿ ವೀರಭದ್ರೇಶ್ವರ ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು    ಬೆಳವಲ ಹಣ್ಣನ್ನು ಖರೀದಿಸುವ ಮೂಲಕ ಗೊಡಚಿ  ವೀರಭದ್ರೇಶ್ವರ ಜಾತ್ರೆಗೆ ಮತ್ತೊಂದು ಹೆಸರು  ‘ಬೆಳವಲ ಹಣ್ಣಿನ ಜಾತ್ರೆ’ ಎನ್ನುವು ದನ್ನು ಸಾಬೀತು ಮಾಡಿದರು.

15–20 ಟ್ರಕ್‌ಗಳಲ್ಲಿ ಜಾತ್ರೆಗೆ ತಂದಿದ್ದ, ಸಿಹಿ ಹುಗ್ಗಿಯ ಸವಿ್ನು ನೀಡಬಲ್ಲ ಬೆಳವಲ ಹಣ್ಣನ್ನು ಜನರು ಮುಗಿಬಿದ್ದು ಖರೀದಿಸಿದರು.
ಜೊತೆಗೆ ಬೋರೆ ಹಣ್ಣು ಮತ್ತು ಬಾಳೆ ಹಣ್ಣಿನ ವ್ಯಾಪಾರವು ಸಹ ಜೋರಾಗಿಯೇ ನಡೆಯಿತು.

ಈ ವರ್ಷ ಉತ್ತಮ ಫಸಲಿದ್ದರಿಂದ ಡಜನ್‌ ಬಳವಲು ಹಣ್ಣಿಗೆ ಕೇವಲ  ₨50ಕ್ಕೆ ಮಾರಾಟ ವಾದವು. ಕೆ. ಜಿ. ಬೋರೆ ಹಣ್ಣು ₨ 20 ರಿಂದ 25ರಲ್ಲಿ ದೊರೆತರೆ, ಉತ್ತಮ ತಳಿಯ ರೇಷ್ಮೆ ಬಾಳೆಹಣ್ಣು ರೂ. 35–40ಕ್ಕೆ ಒಂದು ಡಜನ್‌ ಲಭ್ಯವಾಗುತ್ತಿತ್ತು. ಜವಾರಿ ಬಾಳೆ ಹಣ್ಣು ಸಹ ರೂ. 50–60ಕ್ಕೆ ದೊರೆಯುತ್ತಿತ್ತು.

ಆದರೆ ಇದು ಕೊಳ್ಳುವವರಿಗೆ ಸಿಹಿ ತರಿಸಿದರೆ ವ್ಯಾಪಾರಿಗಳಿಗೆ ಮಾತ್ರ ಕಹಿಯಾಗಿತ್ತು. ಕಚ್ಚಾ ಕಾಯಿಗಳನ್ನು ಭಟ್ಟಿ ಇಳಿಸುವ ಮತ್ತು ಸಾಗಾಟ ಮಾಡುವ ವೆಚ್ಚವೇ ಅಧಿಕವಾಗಿರುವಾಗ  ಲಾಭ ಎಲ್ಲಿಂದ ಬರಬೇಕು ಎನ್ನುತ್ತಾರೆ  ವ್ಯಾಪಾರಿಗಳು.

ಗೊಡಚಿಯ ಜಾತ್ರೆಯಲ್ಲಿ  ನೂಕು ನುಗ್ಗಲು ಇದ್ದರೂ,   ಅನಿಯಾದ ಗ್ರಾಮ ಪಂಚಾಯಿತಿ ಮತ್ತು ಜಾತ್ರಾ ಕಮಿಟಿ ಉತ್ತಮ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಬಳೆಪೇಟೆ, ಆಟಿಕೆ, ಬಾಳೆ, ಬೋರೆ  ಬೆಳವಲು ಹಣ್ಣಿನ ಮಾರಾಟಕ್ಕಾಗಿ ಪ್ರತ್ಯೇಕ ಸ್ಥಾನಗಳನ್ನು ನಿಗದಿಪಡಿಸಿ ಶಿಸ್ತು ಅನುಸರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT