ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ವಿದ್ಯಾರ್ಥಿಗಳಿಗೆ ಕೋವಿಡ್

Last Updated 10 ಮಾರ್ಚ್ 2021, 3:32 IST
ಅಕ್ಷರ ಗಾತ್ರ

ತೋರಣಗಲ್ಲು: ಇಲ್ಲಿನ ಜಿಂದಾಲ್ ಸಂಸ್ಥೆಯ ಒಪಿಜೆ ಕೇಂದ್ರದ ಆವರಣದಲ್ಲಿನ ನರ್ಸಿಂಗ್ ಕಾಲೇಜ್‍ನ 11 ವಿದ್ಯಾರ್ಥಿಗಳಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಾಸ ಸ್ಥಳವಾದ ಜಿಂದಾಲ್ ನ ವಿವಿನಗರದ ಕೆ-2 ಬ್ಲಾಕ್‍ನ್ನು ತಹಶೀಲ್ದಾರ್ ಎಚ್.ಜೆ.ರಶ್ಮಿ ಯವರು ತೋರಣಗಲ್ಲು ನಾಡಕಾರ್ಯಾಲಯದ ಹಾಗೂ ಕುರೆಕುಪ್ಪ ಪುರಸಭೆಯ ಅಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ರಾತ್ರಿ ಸೀಲ್‍ಡೌನ್ ಮಾಡಿದರು.

ನರ್ಸಿಂಗ್ ಕಾಲೇಜ್‍ನ ಸೋಮವಾರ ಹತ್ತು ವಿದ್ಯಾರ್ಥಿಗಳಿಗೆ ಹಾಗೂ ಮಂಗಳವಾರ ಒಬ್ಬ ವಿದ್ಯಾರ್ಥಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದ 86 ವಿದ್ಯಾರ್ಥಿಗಳಿಗೆ ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ ಹಾಗೂ ಒಟ್ಟು 11 ವಿದ್ಯಾರ್ಥಿಗಳನ್ನು ವಿವಿನಗರದ ಕೆ.2 ಬ್ಲಾಕ್ ನ ವಸತಿ ಗೃಹ ಪ್ರತ್ಯೇಕತೆಯಲ್ಲಿಡಲಾಗಿದೆ.

‘ಜಿಂದಾಲ್ ಸಂಸ್ಥೆಯ ಒಪಿಜೆ ಕೇಂದ್ರದ ಆವರಣದಲ್ಲಿನ ನರ್ಸಿಂಗ್ ಕಾಲೇಜ್‍ನ ವಿದ್ಯಾರ್ಥಿಗಳಿಗೆ ಸೋಮವಾರ ಹತ್ತು ವಿದ್ಯಾರ್ಥಿಗಳಿಗೆ ಹಾಗೂ ಮಂಗಳವಾರ ಒಬ್ಬ ವಿದ್ಯಾರ್ಥಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಾಸ ಸ್ಥಳವಾದ ಜಿಂದಾಲ್ ನ ವಿವಿನಗರದ ಕೆ ಬ್ಲಾಕ್‍ನ್ನು ಸೋಮವಾರ ಸೀಲ್‍ಡೌನ್ ಮಾಡಲಾಗಿದೆ’ ಎಂದು ತಹಶೀಲ್ದಾರ್ ಎಚ್.ರಶ್ಮಿ ತಿಳಿಸಿದರು.

ತೋರಣಗಲ್ಲು ಹೋಬಳಿಯ ಕಂದಾಯ ಪರಿವೀಕ್ಷಕ ಕೆ.ಮಂಜುನಾಥ, ಕುರೆಕುಪ್ಪ ಪುರಸಭೆಯ ಸಿಬ್ಬಂದಿ ಪಂಪಾಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT