ಗುರು ಕಾಲೇಜಿಗೆ ಶೇ 85 ಫಲಿತಾಂಶ

ಬುಧವಾರ, ಏಪ್ರಿಲ್ 24, 2019
23 °C

ಗುರು ಕಾಲೇಜಿಗೆ ಶೇ 85 ಫಲಿತಾಂಶ

Published:
Updated:
Prajavani

ಹೊಸಪೇಟೆ: ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಗುರು ಪದವಿ ಪೂರ್ವ ಕಾಲೇಜಿಗೆ ಶೇ 85 ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಅಮೂಲ್ಯ 547 ಅಂಕ ಗಳಿಸಿ ಇಡೀ ಕಾಲೇಜಿಗೆ ಪ್ರಥಮ ಬಂದಿದ್ದಾರೆ. ಹಿಮಂತ್ ರಾಜ್ 520, ಐ. ಬಸವರಾಜ 527, ನಂದಿನಿ ನಾಯ್ಕ 520 ಅಂಕ ಗಳಿಸಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಆಕಾಂಕ್ಷ ದಾಸ್ 600ಕ್ಕೆ 546 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.  ಮೇಘನಾ 534, ಶಿಫಾ ತನ್‍ಸೀನ್ ಬಾವಾಜಿ 510 ಹಾಗೂ ಯಶಸ್ವಿನಿ 504 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು 120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 49 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಡೀನ್‌ ಡಿ. ಪ್ರಸನ್ನಾಂಜನೇಯಲು, ಪ್ರಾಚಾರ್ಯ ಜಿ. ಮಲ್ಲಿಕಾರ್ಜುನ ಸಂತಸ ವ್ಯಕ್ತಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !