ಶುಕ್ರವಾರ, ಸೆಪ್ಟೆಂಬರ್ 17, 2021
30 °C
ರಂಗ ಸುಗ್ಗಿ ಕಾರ್ಯಕ್ರಮ: ಮದಿರೆ ಮರಿಸ್ವಾಮಿ ನೋವಿನ ನುಡಿ

ಸಿರುಗುಪ್ಪ: ಕಲಾವಿದರ ಬದುಕಿಗೆ ಬೆಲೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರುಗುಪ್ಪ: ಕಲೆಗೆ ನಿಜಕ್ಕೂ ಬೆಲೆಯಿದೆ ಆದರೆ ಕಲಾವಿದರ ಬದುಕಿಗೆ ಎಳ್ಳಷ್ಟೂ ಬೆಲೆಯಿಲ್ಲ, ಇದ್ದಿದ್ದರೆ ಯಾವ ಕಲಾವಿದನೂ ಅನಾಥ ಶವವಾಗಿ ಬೀದಿಯಲ್ಲಿ ಸಾಯುತ್ತಿರಲಿಲ್ಲ ಎಂದು ಮದಿರೆ ಮರಿಸ್ವಾಮಿ ಹೇಳಿದರು.

ತಾಲ್ಲೂಕಿನ ಕೊತ್ತಲಚಿಂತ ಗ್ರಾಮದ ಹನುಮಂತಾವಧೂತರ ಮಠದಲ್ಲಿ ಕಾರಂತ ರಂಗಲೋಕ ಬಿ.ಜಿ.ದಿನ್ನೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಸೋಮವಾರ ನಡೆದ ರಂಗ ಸುಗ್ಗಿ ಕಾರ್ಯಕ್ರಮದಲ್ಲಿ ಕಾರಂತ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಪ್ರಜ್ಞೆಯ ಮೂಲಕ ಸಮಾಜದ ಆರೋಗ್ಯ ಉತ್ತಮವಾಗಿಸುವ ಕಲಾವಿದರ ಬಣ್ಣದ ಬದುಕು ರಂಗಾಗಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಅವರ ಬದುಕಿಗೆ ಬೆಂಗಾವಲಾಗುವ ಅನಿವಾರ್ಯತೆ ಇದೆ ಎಂದರು. ರಂಗಕರ್ಮಿ ಬದಿನೆಹಾಳ್ ಭೀಮಣ್ಣ ಮಾತನಾಡಿ, ಕೋವಿಡ್ ಸಂಕಷ್ಟದಿಂದಾಗಿ ಕಲೆ ಮತ್ತು ಕಲಾವಿದರ ಬದುಕು ಬರಡಾಗಿದೆ ಅವರ ಬದುಕು ಹಸನಾಗಿಸಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು.

ನಂತರ ಬಯಲಾಟ ಕಲಾವಿದ ಮುದ್ದಟನೂರು ಜಿ. ವೀರನಗೌಡ ಮತ್ತು ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿಯವರಿಗೆ ಸಂಸ್ಥೆಯ ವತಿಯಿಂದ ‘ಕಾರಂತ ರತ್ನ-2020’ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಣ್ಣಾಜಿ ಕೃಷ್ಣಾರೆಡ್ಡಿ ರಚನೆ ಮತ್ತು ರಾವಿಹಾಳ್ ರಾಮಕೃಷ್ಣ ನಿರ್ದೇಶನದ ‘ಕತ್ತಲೆ ರಾಜ್ಯದ ಮೂರ್ಖರಾಜ’ ನಾಟಕ ಹಾಗೂ ಆರ್. ಭೀಮನಗೌಡ ನಿರ್ದೇಶನದ ಗೊರವರ ಕುಣಿತ ಪ್ರದರ್ಶನ ನಡೆಯಿತು.

ಪಂಪಾರೆಡ್ಡಿ ಕೊತ್ತಲಚಿಂತ, ಮಿಟ್ಟೆಸೂಗೂರು ವೆಂಕಟರೆಡ್ಡಿ, ಸತ್ಯನಾರಾಯಣ ಶೆಟ್ಟಿ, ಎಚ್.ಕೆ. ನರಸನಗೌಡ, ನಾಗನಗೌಡ, ಸತ್ಯ ನಾರಾಯಣ ರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಆರ್.ಪಿ. ಮಂಜುನಾಥ್, ಆರ್. ಚನ್ನನಗೌಡ, ಪಿ.ಕೆ. ರವಿ, ಗುರುನಾಥ್, ವೆಂಕಟೇಶ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.