ಸೋಮವಾರ, ನವೆಂಬರ್ 18, 2019
21 °C

ಸಿಪಿಐ ನಾರಾಯಣಗೆ ಪ್ರಶಸ್ತಿ

Published:
Updated:
Prajavani

ಹೊಸಪೇಟೆ: ಇಲ್ಲಿನ ಟಿ.ಬಿ. ಡ್ಯಾಂ ಸಿ.ಪಿ.ಐ. ವಿ. ನಾರಾಯಣ ಅವರು ಶ್ರೀಕೃಷ್ಣದೇವರಾಯ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಬಳ್ಳಾರಿಯಲ್ಲಿ ಅ. 20ರಂದು ನಡೆಯಲಿರುವ ಆರನೇ ವಿಜಯನಗರ ಸಾಂಸ್ಕೃತಿಕ ವೈಭವ ಹಾಗೂ ಬೀಚಿ ಸ್ಮರಣೆ ಕಾರ್ಯಕ್ರಮದಲ್ಲಿ ನಾರಾಯಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾರಾಯಣ ಅವರು ಪೊಲೀಸ್‌ ಇಲಾಖೆಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಕಾರ್ಯಕ್ರಮ ಸಂಘಟನಾ ಸಮಿತಿಯ ಮುಖ್ಯಸ್ಥ ಕೆ. ರಾಮಲಿಂಗ ತಿಳಿಸಿದ್ದಾರೆ. 

 

ಪ್ರತಿಕ್ರಿಯಿಸಿ (+)