ಮತ್ತೆ ಬೀನ್ಸ್ ಬೆಲೆ ಏರಿಕೆ

ಮಂಗಳವಾರ, ಜೂನ್ 25, 2019
26 °C
ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೆ

ಮತ್ತೆ ಬೀನ್ಸ್ ಬೆಲೆ ಏರಿಕೆ

Published:
Updated:
Prajavani

ಬೀದರ್: ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್‌ ಮತ್ತೆ ಹಿಡಿತ ಸಾಧಿಸಿದೆ. ಬೀನ್ಸ್‌ ಬೆಲೆ ಪ್ರತಿ ಕ್ವಿಂಟಲ್‌ಗೆ ಒಮ್ಮೆಲೇ ₹ 17 ಸಾವಿರಕ್ಕೆ ಜಿಗಿದರೆ, ಬೆಳ್ಳೂಳ್ಳಿ ₹ 7,500 ಹಾಗೂ ಸಬ್ಬಸಗಿ ಬೆಲೆ ₹ 5,500ಗೆ ಏರಿದೆ. ಒಟ್ಟು 18 ಬಗೆಯ ತರಕಾರಿಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಆಘಾತ ಉಂಟು ಮಾಡಿದೆ.

ಪ್ರತಿ ಕ್ವಿಂಟಲ್‌ಗೆ ಕೊತಂಬರಿ ₹ 6 ಸಾವಿರ, ಟೊಮೆಟೊ ₹ 4,800, ಗಜ್ಜರಿ ₹ 4,500, ಕರಿಬೇವು ₹ 3,500, ಬಹುಬೇಡಿಕೆಯ ಬದನೆಕಾಯಿ ಹಾಗೂ ಮೆಂತೆಸೊಪ್ಪು ತಲಾ ₹ 2 ಸಾವಿರ ಹೆಚ್ಚಳವಾಗಿದೆ. ಹಿರೇಕಾಯಿ, ಬೆಂಡೆಕಾಯಿ, ಪಾಲಕ್‌ ಬೆಲೆ ತಲಾ ₹ 1 ಸಾವಿರ, ತೊಂಡೆಕಾಯಿ ಹಾಗೂ ಈರುಳ್ಳಿ ₹ 500, ಎಲೆಕೋಸು ₹ 200 ಏರಿಕೆಯಾಗಿದೆ.

ಬೀದರ್‌ ನಗರಕ್ಕೆ ಮೂರು ಜಿಲ್ಲೆಗಳಿಂದ ಹಸಿ ಮೆಣಸಿನಕಾಯಿ ಬರುತ್ತಿರುವ ಕಾರಣ ಅದರ ಬೆಲೆ ಸಹಜವಾಗಿಯೇ ಕುಸಿದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಮೆಣಸಿನಕಾಯಿ ಬೆಲೆ ₹ 2 ಸಾವಿರ ಕಡಿಮೆಯಾಗಿದೆ. ಅಲೂಗಡ್ಡೆ ಬೆಲೆ ಸಹ ₹ 800 ಇಳಿದಿದೆ.

ಇಲ್ಲಿಯ ಮಾರುಕಟ್ಟೆಗೆ ಮಹಾರಾಷ್ಟ್ರದ ಸೋಲಾಪುರದಿಂದ ಬೀನ್ಸ್, ಮೆಂತೆಸೊಪ್ಪು, ಬೆಂಡೆಕಾಯಿ, ಬೆಳಗಾವಿ, ಹೈದರಾಬಾದ್‌, ಜಾಲನಾದಿಂದ ಮೆಣಸಿನಕಾಯಿ ಆವಕವಾಗಿದೆ. ಹೈದರಾಬಾದ್‌ನಿಂದ ಟೊಮೆಟೊ, ಬದನೆಕಾಯಿ, ಹಿರೇಕಾಯಿ, ತೊಂಡೆಕಾಯಿ, ಬಿಟ್‌ರೂಟ್, ಬೆಳ್ಳೂಳ್ಳಿ ಬಂದಿದೆ.

‘ಮದುವೆ, ಮುಂಜಿವೆ ಹಾಗೂ ಶಾಲು ಕಿರುಗುಣಿ ಕಾರ್ಯಕ್ರಮಗಳು ನಿರಂತರವಾಗಿ ನಡೆದಿರುವ ಕಾರಣ ತರಕಾರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನೂ ಒಂದು ವಾರ ತರಕಾರಿ ಬೆಲೆ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಮಳೆ ಸುರಿಯಲು ಆರಂಭಿಸಿದ 15 ದಿನಗಳ ನಂತರ ಸ್ವಲ್ಪ ಮಟ್ಟಿಗೆ ಬೆಲೆ ಕುಸಿಯುವ ಸಾಧ್ಯತೆ ಇದೆ’ ಎಂದು ತರಕಾರಿ ಸಗಟು ವ್ಯಾಪಾರಿ ಅಮೀರ್‌ ಹೇಳುತ್ತಾರೆ.

ಜಿಲ್ಲೆಯಲ್ಲಿ ಬರ ಇರುವ ಕಾರಣ ರೈತರು ತರಕಾರಿ ಬೆಳೆದಿಲ್ಲ. ನೆರೆಯ ರಾಜ್ಯಗಳಲ್ಲಿ ನೀರಾವರಿ ಸೌಲಭ್ಯವಿರುವ ಪ್ರದೇಶದಲ್ಲಿ ಬೆಳೆದ ತರಕಾರಿ ಮಾತ್ರ ನಗರಕ್ಕೆ ಬರುತ್ತಿದೆ. ಸೊಪ್ಪಿಗೆ ಬೇಡಿಕೆ ಇದ್ದರೂ ಬೆಲೆ ಅಧಿಕ ಇರುವ ಕಾರಣ ಗ್ರಾಹಕರು ಖರೀದಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವ್ಯಾಪಾರಿಗಳು ಸಹ ಹೊರ ಜಿಲ್ಲೆಗಳಿಂದ ಸೊಪ್ಪು ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ.

ಮಳೆ ಸುರಿಯಲು ಆರಂಭವಾದರೆ ಕೊತಂಬರಿ, ಕರಿಬೇವು, ಸಬ್ಬಸಗಿ ಬೆಲೆ ಕುಸಿಯಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !