ಬುಧವಾರ, ಜನವರಿ 22, 2020
17 °C
ಹಿಂದೂಗಳನ್ನು ಕೆಣಕಬೇಡಿ ಎಂದು ಎಚ್ಚರಿಕೆ

ನಮ್ಮ ದೇಶದಲ್ಲಿರಬೇಕೆಂದರೆ ನಾವು ಹೇಳಿದಂತೆ ಕೇಳಬೇಕು: ಶಾಸಕ ಸೋಮಶೇಖರ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ನಮ್ಮ ದೇಶದಲ್ಲಿ ಇರಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತೆ. ಹಿಂದೂಗಳನ್ನು ಕೆಣಕಬೇಡಿ’ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಎಚ್ಚರಿಕೆ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶುಕ್ರವಾರ ನಗರದಲ್ಲಿ ನಡೆದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದ್ದು, ಅದನ್ನು ಎಲ್ಲರೂ ಬೆಂಬಲಿಸಬೇಕು. ಕಾಯ್ದೆ ವಿರೋಧಿಸಿ ಮತ್ತೊಂದು ಸಲ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರೆ ನಾವು ಸುಮ್ಮನೆ ಕೂರಲ್ಲ. ದೇಶದಿಂದ ಹೊರಗೆ ಹಾಕುತ್ತಾರೆ ಎಂಬ ಭಯವಿದ್ದವರು ದೇಶಬಿಟ್ಟು ಹೋಗಬೇಕು. ಇಂದಿನ ರ್‍ಯಾಲಿಯಲ್ಲಿ ಶೇ 5ರಷ್ಟು ಜನ ಬಂದಿದ್ದಾರಷ್ಟೆ. ಜಾಸ್ತಿ ನಕ್ರಾ ಮಾಡಿದರೆ ಇನ್ನುಳಿದ ಶೇ 95ರಷ್ಟು ಜನ ಬರುತ್ತಾರೆ. ಆಗ ಕಾಯ್ದೆ ವಿರೋಧಿಸುವವರು ಯಾರೂ ಉಳಿಯುವುದಿಲ್ಲ’ ಎಂದು ಅವರು ಹೇಳಿದರು.

‘ಯಾರೂ ನಮ್ಮ ತಾಳ್ಮೆ, ಶಾಂತಿ ಪರೀಕ್ಷಿಸಬೇಡಿ. ನಮ್ಮ ದೇಶ, ಪೊಲೀಸರ ಮೇಲೆ ದಾಳಿ ನಡೆಸಿದರೆ ಸರಿಯಿರುವುದಿಲ್ಲ. ಕಾಂಗ್ರೆಸ್‌ ಪುಢಾರಿಗಳು ಸುಳ್ಳು ಹೇಳಿ ದಂಗೆ ಎಬ್ಬಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವ ಆಸೆ ಇದ್ದವರು ಹೋಗಬಹುದು. ಎಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಹಾಗೆಯೇ ಇರೋಣ. ಶತ್ರುಗಳ ರೀತಿ ವರ್ತಿಸಿದರೆ ನಮ್ಮ ಉಗ್ರ ರೂಪ ತೋರಿಸಬೇಕಾಗುತ್ತದೆ’ ಎಂದು ಅವರು ಗುಡುಗಿದರು.

‘ಈ ಸೋಮಶೇಖರ ರೆಡ್ಡಿ ಭಯಂಕರ ದೇಶಭಕ್ತ. ನಾನು ಸತ್ತ ಮೇಲೆ ನನ್ನ ಶವ ಕೂಡ ‘ಭಾರತ್‌ ಮಾತಾಕೀ ಜೈ’ ಎಂದು ಹೇಳುತ್ತೆ. ನಿಮ್ಮಂತೆ ನಾವು ಕಳ್ಳ ಭಕ್ತರಲ್ಲ. ನಿಜವಾದ ಭಕ್ತರು. ನಮಗಾದರೆ ಫ್ಯಾಮಿಲಿ ಪ್ಲ್ಯಾನಿಂಗ್‌. ನಿಮಗೆ ಇಲ್ಲವೇ. ನಾವು ಒಬ್ಬೊಬ್ಬರು 50 ಜನರನ್ನು ಹುಟ್ಟಿಸಿ ಜನಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು