ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಸೋಂಕಿತರ ಶವಗಳನ್ನು ಗುಂಡಿಗೆಸೆದ ಸಿಬ್ಬಂದಿ: ಡಿಸಿ ಕ್ಷಮೆ ಯಾಚನೆ

Last Updated 30 ಜೂನ್ 2020, 14:25 IST
ಅಕ್ಷರ ಗಾತ್ರ

ಬಳ್ಳಾರಿ: ಕೊರೊನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್ ನಿಂದ ಎಳೆದು ತಂದು ಒಂದೇ ಗುಂಡಿಗೆ ಎಸೆಯುವ 1 ನಿಮಿಷ 28 ಸೆಕೆಂಡಿನ ವೀಡಿಯೋ ಜಿಲ್ಲೆಗೆ ಸಂಬಂಧಿಸಿದ್ದು, ಈ ಘಟನೆಗಾಗಿ ಜಿಲ್ಲಾಡಳಿತವು ಮೃತರ ಸಂಬಂಧಿಕರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಬೇಷರತ್ ಆಗಿ ಕ್ಷಮೆ ಯಾಚಿಸುತ್ತದೆ ಎಂದು ಜಿಲ್ಲಾಧಿಕಾರಿ‌ ಎಸ್.ಎಸ್.ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯ ವಾಟ್ಸ್ಯಾಪ್ ಗುಂಪುಗಳಲ್ಲಿ‌ ವೀಡಿಯೊ ಹರಿದಾಡಿದ ಬಳಿಕ ಅವರು ಹೆಚ್ಚುವರಿ ಜಿಲ್ಲಾಧಿಕಾರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದರು.

'ತನಿಖೆಯಲ್ಲಿ, ವೀಡಿಯೋ ಬಳ್ಳಾರಿಯಲ್ಲಿ ನಡೆದಿದ್ದ ಅಂತ್ಯಸಂಸ್ಕಾರದ್ದೇ ಆಗಿರುವುದು ದೃಢಪಟ್ಟಿದೆ. ಶವಗಳನ್ನು ಸೋಂಕು ಹರಡದಂತೆ ಸಂಪೂರ್ಣ ಮುಚ್ಚಲಾಗಿತ್ತು. ಆದರೆ ಅವುಗಳನ್ನು ಗುಂಡಿಗೆ ಎಸೆದಿರುವುದು ವಿಷಾದನೀಯ ವರ್ತನೆಯಾಗಿದೆ.‌ಇದನ್ನು ಜಿಲ್ಲಾಡಳಿತ ಖಂಡಿಸುತ್ತದೆ' ಎಂದಿದ್ದಾರೆ.

'ಅಗೌರವಯುತವಾಗಿ ಅಂತಿಮ ಸಂಸ್ಕಾರ ನಡೆಸಿದ ತಂಡವನ್ನು ಬದಲಾಯಿಸಿದ್ದು, ವಿಮ್ಸ್ ಆಸ್ಪತ್ರೆಯ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ತರಬೇತಿ ಪಡೆದವರನ್ನು ನಿಯೋಜಿಸಲಾಗುವುದು' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT